ರಸ್ತೆಗಿಳಿಯಲಿದೆ…. ಎಥೆನಾಲ್‌ ನಲ್ಲಿ ಚಲಿಸುವ ವಾಹನಗಳು – ನಿತಿನ್‌ ಗಡ್ಕರಿ

ಮಂಗಳೂರು: ಸಂಪೂರ್ಣವಾಗಿ ಎಥೆನಾಲ್ ನಲ್ಲಿ ಚಲಿಸುವ ನೂತನ ವಾಹನಗಳನ್ನು ರಸ್ತೆಗಿಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಜೂ.26ರಂದು ನಾಗಪುರದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಎಲೆಕ್ಟ್ರಿಕ್ ವಾಹನವೊಂದನ್ನು ನಿರ್ಮಿಸಿರುವ ಮರ್ಸಿಡಿಸ್ ಬೆಂಜ್ ಕಂಪನಿ ಅಧ್ಯಕ್ಷರನ್ನು ತಾವು ಇತ್ತೀಚೆಗೆ ಭೇಟಿಯಾಗಿದ್ದು, ಆಗ ಅವರು ನಾವು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ತಯಾರಿಸುತ್ತೇವೆ ಎಂದು ಹೇಳಿದ್ದರು. ಆದರೆ ನಾವು ಸಂಪೂರ್ಣವಾಗಿ ಎಥೆನಾಲ್ ನಲ್ಲಿ ಚಲಿಸುವ ಹೊಸ ವಾಹನಗಳನ್ನು ತರಲಿದ್ದೇವೆ. ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್ ಗಳು 100 ಶೇಕಡ ಎಥೆನಾಲ್ ಲ್ಲಿ ಚಲಿಸುತ್ತದೆ. ಅದು 40 ಶೇಕಡ ವಿದ್ಯುತ್ತನ್ನು ಉತ್ಪಾದಿಸುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಎಥೆನಾಲ್ ದರ ಲೀಟರ್ ಗೆ ರೂ.60, ಪೆಟ್ರೋಲ್ ದರ ಲೀಟರ್ ಗೆ 120 ರೂ, ಎಥೆನಾಲ್ ಶೇಕಡ‌ 40ರಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತದೆ. ಹಾಗಾಗಿ ಎಥೆನಾಲ್ ಗೆ ಲೀಟರ್ ಗೆ 15 ರೂಪಾಯಿ ಖರ್ಚು ಮಾಡಿದಂತೆ ಆಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here