ಗಂಗಾ ಡಾಲ್ಫಿನ್(Plantanista gangetica)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಈ ನದಿಡಾಲ್ಫಿನ್ ಗಳಲ್ಲಿ ಎರಡು ಪ್ರಭೇದ : ಇಂಡಸ್ ನದಿಡಾಲ್ ಫಿನ್ ಮತ್ತು ಗಂಗಾನದಿ ಡಾಲ್‌ಫಿನ್. ಗಂಗಾ ನದಿಡಾಲ್ಫಿನ್ ಹೆಚ್ಚಾಗಿ ಗಂಗ, ಬ್ರಹ್ಮ ಪುತ್ರ ಹಾಗು ಬಾಂಗ್ಲಾದೇಶ, ನೇಪಾಳದಲ್ಲಿ ಹರಿಯುವ ಇದರ ಉಪನದಿಗಳಲ್ಲಿ ಕಾಣಸಿಗುವುದು. ಈ ಅಪರೂಪದ ಡಾಲ್ಫಿನ್ ತಳಿಯನ್ನು ನಮ್ಮ ಭಾರತ ಸರ್ಕಾರವು ರಾಷ್ಟ್ರೀಯ ಜಲ ಪ್ರಾಣಿ ಎಂದು ಘೋಷಿಸಿದೆ.
ಉಳಿದೆಲ್ಲಾ ಡಾಲ್ಫಿನ್ ಗಳಿಗಿಂತ ಉದ್ದವಾದ ಹಾಗು ಮೊನಚಾದ ಮೂಗು ಹೊಂದಿರುತ್ತದೆ. ಬಾಯಿ ಮುಚ್ಚಿದಾಗಲೂ ಮೇಲ್ಭಾಗದ ಹಾಗು ಕೆಳಭಾಗದ ದವಡೆಯ ಕೋರೆಯ ಹಲ್ಲುಗಳು ಕಾಣಿಸುತ್ತದೆ. ಕಣ್ಣು ಕಾಣಿಸದಿದ್ದರೂ ಬೆಳಕಿನ ವೇಗ ಹಾಗು ದಿಕ್ಕನ್ನು ಗುರುತಿಸಬಲ್ಲದು. ತಮ್ಮ ಬೇಟೆಯನ್ನು ಸೂಕ್ಷ್ಮವಾಗಿ ಶಬ್ದದ ಅಲೆಗಳು ಹಾಗು ಪ್ರತಿಧ್ವನಿಯ ಮೂಲಕ ಮಾಡುತ್ತವೆ (echdocation). ಬಲ ಹಾಗು ಎಡ ಎರಡೂ ಪಕ್ಕಗಳಲ್ಲಿ ಈಜುತ್ತದೆ. ಹೆಣ್ಣು ಡಾಲ್ಫಿನ್‌ಗಳು ಗಂಡು ಡಾಲ್‌ಫಿನ್ ಗಳಿಗಿಂತ ದೊಡ್ಡದಾಗಿರುತ್ತದೆ. ಹಿಂಬದಿಯ ರೆಕ್ಕೆಗಳಿರುವುದಿಲ್ಲ, ಈಜು (flippers) ರೆಕ್ಕೆಗಳು ಹಾಗು ಬಾಲ ತೆಳುವಾಗಿರುತ್ತದೆ ಹಾಗು ದೇಹದ ಆಕಾರಕ್ಕೆ ಹೋಲಿಸಿದರೆ ದೊಡ್ಡದಾಗಿರುತ್ತದೆ.
ಸಂತಾನೋತ್ಪತ್ತಿಯ ಸಮಯ ಸಾಮಾನ್ಯವಾಗಿ ಡಿಸೆಂಬರ್ ನಿಂದ ಜನವರಿ ಹಾಗು ಮಾರ್ಚಿನಿಂದ ಮೇವರೆಗೂ ಆಗುತ್ತದೆ. 9-10 ಮಾಸಗಳಷ್ಟು ಗರ್ಭವನ್ನು ಹೊರುತ್ತದೆ, ಒಂದು ವರ್ಷದವರೆಗೂ ಮಕ್ಕಳ ಪಾಲನೆ ಶುಶ್ರೂಷೆಯನ್ನು ಮಾಡುತ್ತದೆ. ಸುಮಾರು 10 ವರ್ಷ ವಯಸ್ಸಿಗೆ ಡಾಲ್ಫಿನ್ ಗಳು ಪ್ರಬುದ್ಧತೆಯನ್ನು ಹೊಂದಿ, ಸಂತಾನೋತ್ಪತ್ತಿಗೆ ಸಾಮರ್ಥ್ಯವನ್ನು ಹೊಂದುತ್ತವೆ. ಸಾಮಾನ್ಯವಾಗಿ ಈಜುವಾಗ ನೀರಿನಿಂದ ಹೊರಗೆ ಜಿಗಿದು ಹಾರುತ್ತದೆ ಹಾಗು ಕೆಲವೊಮ್ಮೆ ಈಜುವಾಗ ಅದರ ಕೊಕ್ಕು ನೀರಿನ ಮಟ್ಟದಲ್ಲಿ ಮೇಲೆ ಕಾಣಿಸುತ್ತಿರುತ್ತದೆ.