ನೂರರ ವೃದ್ಧೆಯಿಂದ ಮೋದಿಗೆ 15 ಎಕರೆ ಭೂಮಿ

ಮಂಗಳೂರು: ನೂರು ವರ್ಷದ ವೃದ್ದೆಯೊಬ್ಬರು ತನ್ನ ಸುಮಾರು 15 ಎಕರೆ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ ಹೆಸರಿಗೆ ಬರೆದುಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಅಜ್ಜಿಯನ್ನು ಮಂಗಿಬಾಯಿ ತನ್ವಾರ್ ಎಂದು ಗುರುತಿಸಲಾಗಿದೆ.

ರಾಜಗರ್ ಜಿಲ್ಲೆಯಿಂದ 65 ಕಿ.ಮೀ ದೂರದಲ್ಲಿರುವ ಜಾಗೀರ್ ಗ್ರಾಮದ ಹರಿಪುರ ನಿವಾಸಿಯಾಗಿದ್ದು, ಅಜ್ಜಿಯ ಘೋಷಣೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೇಶಕ್ಕೆ ನರೇಂದ್ರ ಮೋದಿಯಿಂದ ಒಳ್ಳೆಯದಾಗಿದ್ದು ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಅವರು ವಯಸ್ಸಾದವರಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಕಲ್ಪಿಸಿದ್ದಾರೆ ಎಂದು ಅಜ್ಜಿ ಹೇಳಿದ್ದಾರೆ.

ಮಂಗಿಬಾಯಿಗೆ 14 ಮಂದಿ ಮಕ್ಕಳಿದ್ದಾರೆ. ಮೋದಿ ಕೂಡ ನನ್ನ ಮಗನಂತೆ ಹೀಗಾಗಿ ನನ್ನ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುತ್ತೇನೆ ಎಂದು ಅಜ್ಜಿ ಹೇಳಿದ್ದಾರೆ. ನಾನು ತೀರ್ಥಯಾತ್ರೆಗೆ ಹೊರಟಿದ್ದ ಸಂದರ್ಭದಲ್ಲಿ ಮೋದಿಯವರು ನಮಗೆ ಉಳಿದುಕೊಳ್ಳಲು ಮನೆ ಆಹಾರ ಹಾಗೂ ಹಣವನ್ನು ನೀಡುವ ಮೂಲಕ ನಮ್ಮ ಮನೆಯವರಂತೆ ಅತ್ಯಂತ ಪ್ರೀತಿಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಮೋದಿಯನ್ನು ನನ್ನದೇ ಮಗ ಎಂದುಕೊಂಡು ನನ್ನ ಜಮೀನು ಬರೆದುಕೊಡುವುದಾಗಿ ಅಜ್ಜಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here