ಚುಕ್ಕೆ ಕೊಕ್ಕಿನ ಬಾತುಕೋಳಿ (Anas poecilorhyncha)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಚುಕ್ಕೆ ಹಂಸವು ಉಷ್ಣವಲಯದಲ್ಲಿ ಪೂರ್ವ ಏಷ್ಯಾದಲ್ಲಿರುವ ತಳಿಗೆ ಸೇರಿದೆ. ಅವುಗಳಲ್ಲಿ ಮೂರು ಉಪಜಾತಿಗಳಿವೆ.
ಚುಕ್ಕೆ ಗುರುತಿನ ಭಾರತದ ಹಂಸ, ಪೂರ್ವದ ಚುಕ್ಕೆ ಹಂಸ, ಧರ್ಮದ ಚುಕ್ಕೆ ಹಂಸ, ಈ ಹಂಸಗಳು ಶುಭ್ರ ಸರೋವರ ತೇವ ಪ್ರದೇಶದಲ್ಲಿ ಕಂಡು ಬರುತ್ತದೆ. ಈ ಹಂಸವು ಕಾಡು ಬಾತುಕೋಳಿಯ ಗಾತ್ರದ್ದಾಗಿದೆ.
55 ರಿಂದ 63 ಸೆ.ಮೀ ಉದ್ದ 83 ರಿಂದ 95 ಸೆ.ಮೀ ರೆಕ್ಕೆಗಳ ಸುತ್ತಳತೆ ಇರುತ್ತದೆ. ದೇಹವು 800 ರಿಂದ 1500 ಗ್ರಾಂ ತೂಕವಿರುತ್ತದೆ. ಇವು ಬೂದುಬಣ್ಣದ ಬಿಳಿ ಛಾಯೆಯ ತಲೆ ಮತ್ತು ಕುತ್ತಿಗೆಗಳ ಪಕ್ಷಿಗಳು. ರೆಕ್ಕೆಗಳು ಬಿಳಿ ಛಾಯೆ ಹೊಂದಿರುತ್ತದೆ. ಕೆಳಗೆ ಬೂದು ಬಣ್ಣವಿರುತ್ತದೆ. ಗಂಡು ಹಂಸಕ್ಕೆ ಕೊಕ್ಕಿನ ಬುಡದಲ್ಲಿ ಕೆಂಪು ಚುಕ್ಕೆ ಇರುತ್ತದೆ. ಹೆಣ್ಣಿಗೆ ಇದು ಇರುವುದಿಲ್ಲ.