ಸಮಾನ ನಾಗರಿಕ ಸಂಹಿತೆಗೆ ಎನ್ ಡಿ ಎ ಮಿತ್ರ ಪಕ್ಷಗಳಿಂದ ವಿರೋಧ

ಮಂಗಳೂರು: ಏನ್ ಡಿ ಎ ಆಪ್ತಮಿತ್ರ ಪಕ್ಷಗಳು ಉದ್ದೇಶಿತ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿವೆ. ಇದು ಸಾಂಸ್ಕೃತಿಕ ವೈವಿಧ್ಯತೆ ಹೊಂದಿದ 200ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿರುವ ಪ್ರದೇಶದಲ್ಲಿ ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೊಟಕುಗೊಳಿಸುವ ಭೀತಿ ಇದೆ ಎಂಬ ಆತಂಕ ವ್ಯಕ್ತಪಡಿಸಿವೆ. ಭಾರತದ ಒಟ್ಟು ಬುಡಕಟ್ಟು ಜನಾಂಗಗಳ ಪೈಕಿ ಶೇಕಡ 12ರಷ್ಟು ಮಂದಿ ಈಶಾನ್ಯ ಭಾಗದಲ್ಲಿದ್ದಾರೆ.

ಯುಸಿಸಿ ವಿರೋಧಿ ಕೂಗಿಗೆ ಧ್ವನಿಗೂಡಿಸಿದವರ ಪೈಕಿ ಇದೀಗ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಕೂಡ ಸೇರಿದ್ದಾರೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಬಿಜೆಪಿ ಆಪ್ತಮಿತ್ರ ಪಕ್ಷವಾಗಿದ್ದರು ಸಮಾನ ನಾಗರಿಕ ಸಂಹಿತೆ ಭಾರತದ ಮೂಲ ಪರಿಕಲ್ಪನೆಗೆ ವಿರೋಧ ಎಂಬ ಆತಂಕ ವ್ಯಕ್ತಪಡಿಸಿದೆ.

ಇಡೀ ಈಶಾನ್ಯ ಭಾರತ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಎನ್ನುವುದು ರಾಜಕೀಯ ಪಕ್ಷವಾಗಿ ನಮಗೆ ಮನವರಿಕೆಯಾಗಿದೆ. ಇದು ಹಾಗೆ ಇರಬೇಕು ಹಾಗೂ ಯಾರು ಇದನ್ನು ಕೆಡಿಸಬಾರದು ಎನ್ನುವುದು ನಮ್ಮ ಬಯಕೆ ಎಂದು ಸ್ಪಷ್ಟಪಡಿಸಿದೆ. ನಾಗಾಲ್ಯಾಂಡ್ ನಲ್ಲಿ ಬಿಜೆಪಿಯ ಮತ್ತೊಂದು ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಡೆಮೊಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಶನಿವಾರ ಹೇಳಿಕೆ ನೀಡಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವುದು ಭಾರತದ ಅಲ್ಪಸಂಖ್ಯಾತ ಸಮುದಾಯಗಳ ಮತ್ತು ಬುಡಕಟ್ಟು ಜನಾಂಗಗಳ ಸ್ವಾತಂತ್ರ್ಯ ಹಾಗೂ ಹಕ್ಕುಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯ ಪಟ್ಟಿದೆ. ಶೇಕಡ 94 ರಷ್ಟು ಬುಡಕಟ್ಟು ಜನರೇ ಇರುವ ಮಿಜೋರಾಂನಲ್ಲಿ ಕೂಡ ಯುಸಿಸಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಳೆದ ಫೆಬ್ರವರಿಯಲ್ಲಿ ವಿಧಾನಸಭಾ ಸಮಾನ ನಾಗರಿಕ ಸಂಸಂಹಿತೆಯನ್ನು ವಿರೋಧಿಸುವ ಅವಿರೋಧ ನಿರ್ಣಯ ಅಂಗೀಕರಿಸಿತ್ತು.

LEAVE A REPLY

Please enter your comment!
Please enter your name here