ಪ್ರಾಣಿ ಪ್ರಪಂಚ – 17

ಔಗು ಜಿಂಕೆ (Gazella bennettii)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಔಗು ಜಿಂಕೆಗಳು ಈಗ ಭಾರತದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಕೆಲವು ನಿರ್ಜನವಾದ ಪ್ರದೇಶದಲ್ಲಿ ಕಂಡುಬರುತ್ತವೆ ಹಾಗೂ ನೇಪಾಳದ ನೈರುತ್ಯ ಹಾಗೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲೂ ಇವು ವಾಸಿಸುತ್ತಿವೆ. ಫ್ರೆಂಚ್‌ ನಿಸರ್ಗವಾದಿ ಆಲ್‌ ಫ್ರೆಂಡ್‌ ಡ್ಯುವಾಸೆಲ್‌ ಎಂಬುವರು ಈ ಜಿಂಕೆಗೆ ಬರಸಿಂಗ ಎಂಬ ಹೆಸರನ್ನೂ ನೀಡಿದ್ದಾರೆ. ಅದರ ಪ್ರಮುಖ ಅಂಗವೆಂದರೆ ಇದರ ಕೊಂಬುಗಳು ಒಂದು ಪ್ರಬುದ್ಧ ಜಿಂಕೆಗೆ ಚೂಪಾದ ಕೊಂಬುಗಳು 10 ರಿಂದ 14 ಅಥವಾ ಕೆಲವು 20ರವರೆಗೆ ಇರುತ್ತದೆ. 12 ಮೊನೆಯುಳ್ಳ ಅಥವಾ ಕೊಂಬುಗಳುಳ್ಳ ಜಿಂಕೆಯೆಂದೇ ಕರೆಯುತ್ತಾರೆ. ಬರಸಿಂಗವನ್ನು ಅಸ್ಸಾಮಿಯಲ್ಲಿ ಡೋಲ್ಹೋ ರಿನಾ, ಎಂದು ಕೇಂದ್ರ ಭಾರತದಲ್ಲಿ ಗೋಯಿನ್‌ ಜಾಕ್‌ ಅಥವಾ ಗೋನಿ ಎಂದು ಕರೆಯುತ್ತಾರೆ.

ಭೌಗೋಳಿಕವಾಗಿ ಎರಡು ಜಾತಿಯ ಬರಸಿಂಗಗಳನ್ನು ಗುರುತಿಸಲಾಗಿದೆ. ಇಂದು ಆರ್.ಡಿ. ಡ್ಯುವಸಿಲೇ ಅವರು ಗುರುತಿಸಿರುವ ಔಗುಗಳು ಇವು ಉತ್ತರ ಪ್ರದೇಶದ ಟೆರೈ ಜಾಗಗಳಲ್ಲಿ ಹಾಗೂ ಅಸ್ಸಾಂ ಮತ್ತು ಸುಂದರ ಬನಕಾಡುಗಳಲ್ಲಿ ಇರುವದು. ಇದರ ಕಾಲುಗಳಲ್ಲಿರುವ ಒರಟಾದ ಚರ್ಮವು ಮೃದುವಾದ ನೆಲದಲ್ಲಿ ಓಡುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ದೊಡ್ಡ ತಲೆಬುರುಡೆ ಹೊಂದಿದೆ. ಇನ್ನೊಂದು ಜಾತಿಯ ಬರಸಿಂಗಗಳನ್ನು ಆರ್.ಡಿ. ಬ್ರಾನ್‌ ಡೆರೀಯವರು ಗುರುತಿಸಿದ್ದಾರೆ. ಇವು ಭಾರತದ ಮಧ್ಯಪ್ರದೇಶದಲ್ಲಿರುವ ಒರಟಾದ ಪ್ರದೇಶಗಳಲ್ಲಿ ಸಿಗುತ್ತದೆ. ಈ ಜಾತಿಯವು ಹೆಚ್ಚು ಬೆದರಿಕೆಯನ್ನು ಹುಟ್ಟಿಸುವಂತಹುದಾಗಿದೆ.

ವಾಸಸ್ಥಾನ : ಬರಸಿಂಗಗಳು ಸಾಮಾನ್ಯವಾಗಿ ಇಂಡಸ್‌, ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳ ತಪ್ಪಲಿನಲ್ಲಿ  ಹಾಗೂ ಕೇಂದ್ರ ಭಾರತ ಹಾಗೂ ಗೋದಾವರಿ ನದಿ ತೀರಗಳಲ್ಲಿ ವಾಸಿಸುತ್ತವೆ. ಸಾವಿರಾರು ವರ್ಷಗಳ ಹಿಂದೆ ಇದರ ಮೂಳೆಗಳು ಗುಜರಾತಿನ ಲಂಗನೀ ಎಂಬ ಪ್ರದೇಶದಲ್ಲಿ ದೊರೆತಿವೆ. ಈಗ ಇವು ಸಂಪೂರ್ಣವಾಗಿ ಪಶ್ಚಿಮ ಭಾಗಗಳಿಂದ ಕಾಣೆಯಾಗಿವೆ. 1964ರಲ್ಲಿ ಇವುಗಳ ಸಂಖ್ಯೆ ಭಾರತದಲ್ಲಿ 3000 ರಿಂದ 4000ದವರೆಗೆ ಇತ್ತು ಎನ್ನಲಾಗಿದೆ. ಟೆರೈ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಜಿವುಗಿರುವ ಜಾಗಗಳಲ್ಲಿ ವಾಸಿಸುತ್ತವೆ. ಭಾರತದಲ್ಲಿ ಕಾಡಿನ ಸಮೀಪವಿರುವ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ.

ಭಾರತದ ಈಶಾನ್ಯ ಭಾಗದಲ್ಲಿರುವ ಅಸಾಂನಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಅಸ್ಸಾಂನಲ್ಲಿರುವ ಕಾಜಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿವೆ. ಮಾನಸ್‌ ರಾಷ್ಟ್ರೀಯ ಉದ್ಯಾನದಲ್ಲಿ ಕೆಲವು ಮಾತ್ರ ಸಿಗುತ್ತವೆ. ಅರುಣಾಚಲ ಪ್ರದೇಶದಲ್ಲಿ ಇರುವ ಸಂಭವವು ಉಂಟು.

LEAVE A REPLY

Please enter your comment!
Please enter your name here