ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನವ ದೆಹಲಿಯಲ್ಲಿರುವ ನಿವಾಸದ ಬಳಿ ಡ್ರೋನ್ ಹಾರಾಟವಾಗಿರುವ ಕುರಿತು ವರದಿಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿಯವರ ವಿಶೇಷ ರಕ್ಷಣಾ ತಂಡ ಡ್ರೋನ್ ಹಾರಾಟವನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಡ್ರೋನ್ ಪತ್ತೆ ಕಾರ್ಯವನ್ನು ಆರಂಭಿಸಿರುವ ಪೊಲೀಸರಿಗೆ ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ ಎಂದೂ ವರದಿ ತಿಳಿಸಿದೆ. ಮೋದಿ ಅವರ ನಿವಾಸವು ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಆದರೂ ಡ್ರೋನ್ ಕಾಣಿಸಿಕೊಂಡಿರುವುದು ಆತಂಕಕ್ಕೀಡು ಮಾಡಿದೆ.