ಪ್ರಾಣಿ ಪ್ರಪಂಚ – 18

ಕಾಡೆಮ್ಮೆ (Bos gaurus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಕಾಡೆಮ್ಮೆಯು ದಕ್ಷಿಣ ಹಾಗೂ ನೈರುತ್ಯ ಏಶಿಯಾದಲ್ಲಿರುವ ಕಪ್ಪು ಬಣ್ಣದ ಪ್ರಾಣಿಯಾಗಿದೆ. ಇವುಗಳ ಸಂಖ್ಯೆಯು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾಡೆಮ್ಮೆಯು ಮಂದಪ್ರಾಣಿಯ ಉಪಜಾತಿಗೆ ಸೇರಿದ್ದು, ಸಾಕುವ ಎಮ್ಮೆ, ಯಾಕ, ನೀರೆಮ್ಮೆಗಳೂ ಇದೇ ಜಾತಿಗೆ ಸೇರುತ್ತವೆ. ಕಾಡೆಮ್ಮೆಯು (Wild Cattle) ಅವುಗಳಲ್ಲಿ ದೊಡ್ಡ ತಳಿಯ ಪ್ರಾಣಿಯಾಗಿದೆ. ಹೆಚ್ಚು ಬೇಟೆಯಾಡುವ ಪ್ರಾಣಿಗಳಲ್ಲಿ ಭಾರತದ ಕಾಡೆಮ್ಮೆಯು ಪ್ರಮುಖವಾದುದು.

ಗರ್ಭಧಾರಣೆಯ ಸಮಯದಲ್ಲಿ ಸಾಮಾನ್ಯವಾಗಿ 275 ದಿನಗಳು-ಒಂದು ಅಥವಾ ಎರಡು ಕರುಗಳಿಗೆ ಜನ್ಮ ವೀಯುತ್ತವೆ. ಸಾಮಾನ್ಯವಾಗಿ 7 ರಿಂದ 12ನೇ ತಿಂಗಳಲ್ಲಿ ಮರಿಗಳಿಗೆ ಹಾಲೂ ಕುಡಿಯುವುದನ್ನು ಬಿಡಿಸುತ್ತವೆ. ಮರಿಗಳು 2 ಅಥವಾ 3ನೇ ವಯಸ್ಸಿಗೆ ಲೈಂಗಿಕವಾಗಿ ಪ್ರಬುಧ್ಧವಾಗುತ್ತವೆ. ವರುಷವಿಡೀ ಸಮಾಗಮವು ನಡೆದರೂ ಡಿಸೆಂಬರ್‌ ನಿಂದ ಜೂನ್‌ ವರೆಗೆ ಹೆಚ್ಚಾಗಿ ನಡೆಯುತ್ತದೆ. ಕಾಡೆಮ್ಮೆಗಳ ವಯಸ್ಸು ಸಾಮಾನ್ಯವಾಗಿ 30 ವರುಷಗಳು.

ಕಾಡೆಮ್ಮೆಗಳ ಆಹಾರವು ಪ್ರಮುಖವಾಗಿ ಹುಲ್ಲು, ಹಸಿರೆಲೆ, ಕುರುಚಲು ಸಸ್ಯ ಹಾಗೂ ಚಿಕ್ಕ ಗಿಡಗಳು, ವಿಶೇಷವಾಗಿ ಎಲೆಗಳು ಆಗಿವೆ. ಅವುಗಳ ಆಕಾರ, ಶಕ್ತಿಗಳಿಂದಾಗಿ ಕಾಡೆಮ್ಮೆಗಳಿಗೆ ಕೆಲವು ಜನ್ಮಜಾತವಾದ ವೈರಿಗಳಿವೆ. ಉಪ್ಪು ನೀರಿನ ಮೊಸಳೆಗಳು, ಚಿರತೆಗಳು, ಕಾಡುನಾಯಿಗಳು ಮರಿಗಳ ಮೇಲೆ ಆಕ್ರಮಣ ಮಾಡುತ್ತವೆ. ಆದರೆ ಪ್ರಬುಧ್ಧ ಕಾಡೆಮ್ಮೆಯನ್ನು ಹುಲಿಗಳು ಮಾತ್ರ ಕೊಲ್ಲುತ್ತವೆ. ಕೆಲವು ಸಲ ಹುಲಿಯೇ ಎಮ್ಮೆಯ ಕೈಯಲ್ಲಿ ಸಾಯುತ್ತದೆ.

LEAVE A REPLY

Please enter your comment!
Please enter your name here