ಪ್ರಾಣಿ ಪ್ರಪಂಚ – 19

ಕತ್ತೆಕಿರುಬ (Hyaena hyaena)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಪಟ್ಟೆ ಕತ್ತೆಕಿರುಬವು ನಾಯಿ ಜಾತಿಯ ಪ್ರಾಣಿಯಾಗಿದ್ದು, ಇದರ ಮೈಮೇಲೆ ಪಟ್ಟಿಗಳಿವೆ. ಇದು ಮಾಂಸಾಹಾರಿ ಪ್ರಾಣಿಯಾಗಿದೆ. ಉತ್ತರ-ಪೂರ್ವ ಆಫ್ರಿಕಾ, ಮಧ್ಯಪೂರ್ವದೇಶಗಳು, ಮಧ್ಯ ಏಶಿಯಾ ಭಾರತೀಯ ಉಪ ಖಂಡಗಳಲ್ಲಿ ಈ ಪ್ರಾಣಿಗಳಿವೆ.
ತಮ್ಮ ಮರಿಗಳನ್ನು ಬೆಳೆಸಲು ಗಂಡು-ಹೆಣ್ಣು ಎರಡೂ ಕತ್ತೆಕಿರುಬಗಳು ಕಾಳಜಿ ವಹಿಸುತ್ತವೆ, ಇವು ಪುಕ್ಕಲು ಸ್ವಭಾವದ ಪ್ರಾಣಿಗಳು, ಪ್ರಾಚೀನ ಕಾಲದಿಂದಲೂ ಆಫ್ರಿಕದಲ್ಲಿ ಈ ಪ್ರಾಣಿಗಳು ದಟ್ಟವಾಗಿ ವಾಸಿಸುತ್ತಿದ್ದವು, ಈ ಪ್ರಾಣಿಗಳು ದಷ್ಟ ಪುಷ್ಟ ದೇಹವನ್ನು ಹೊಂದಿದ್ದು ಉದ್ದಕಾಲುಗಳು, ದಪ್ಪ ತಲೆ ಹೊಂದಿವೆ. ಇವುಗಳ ಆಹಾರವು ಪ್ರಾಣಿಗಳ ಮೂಳೆ, ಮೂಳೆಯ ಮೃದುಭಾಗ, ಮೂಳೆ ರಜ್ಜು, ಮೂಳೆ ನೆಣ ಮುಂತಾದವು. ಕೆಲವೆಡೆ ಹಣ್ಣುಗಳೂ ಹೌದು. ಕಿರುಬವು ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತದೆ.

LEAVE A REPLY

Please enter your comment!
Please enter your name here