ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ಮಂಗಳೂರು: ಜು.4ರ ತಡರಾತ್ರಿ ಬೀಸಿದ ಭಾರೀ ಗಾಳಿಗೆ ಕುಲಾಯಿ ಪ್ರದೇಶದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬೆಳಗಿನ ಜಾವ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಎಂಬ ಯುವಕ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಅದನ್ನ ತುಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲೊಂದರ ಭಾಗ ಸಿಲುಕಿಗೊಂಡ ಪರಿಣಾಮ ಭಾರೀ ಜೀವಹಾನಿ ತಪ್ಪಿದೆ. ಬಲವಾಗಿ ಬೀಸಿದ ಗಾಳಿಗೆ ವಿವಿಧೆಡೆ ಮನೆಯ ಛಾವಣಿ ಶೀಟ್ಗಳು ಹಾರಿಹೋಗಿ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here