ಮಂಗಳೂರು(ಚೆನ್ನೈ): ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ದಿನಗಳಿಂದ ಟೊಮೇಟೊ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಈಗ ಹಸಿಮೆಣಸಿನಕಾಯಿ ಬೆಲೆ ಕೂಡ ಹೆಚ್ಚಾಗಿದೆ.
ಚೆನ್ನೈ ಮಾರುಕಟ್ಟೆಯಲ್ಲಿ ಜು.4 ರಂದು 1 ಕೆ.ಜಿ ಹಸಿಮೆಣಸಿನಕಾಯಿ ಬೆಲೆ 400 ರೂಪಾಯಿಗೆ ಏರಿಕೆಯಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಹಸಿಮೆಣಸಿನಕಾಯಿ ಸರಬರಾಜು ಕಡಿಮೆಯಾಗಿದೆ. ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ಪೂರೈಕೆಯಲ್ಲಿನ ಕುಸಿತವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ದಕ್ಷಿಣ ಕನ್ನಡದಲ್ಲಿ ಹಸಿಮೆಣಸಿನಕಾಯಿ ಬೆಲೆ ಕೆಜಿ ಗೆ 30 ರಿಂದ 40 ರೂಪಾಯಿಯಷ್ಟಿದ್ದು, ಈಗ ಬೆಲೆ 120 ಕ್ಕೆ ಏರಿಕೆಯಾಗಿದೆ.