ಗರುಡ(Milvus migrans)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಕಪ್ಪು ಗಿಡುಗದ ಒಂದು ರೀತಿಯ ಪ್ರಭೇದವೇ(ಉಪವರ್ಗ) ಈ ಪರಿಯಾ ಕೈಟ್ ಗಿಡುಗ. ಹೆಚ್ಚಾಗಿ ತ್ಯಾಜ್ಯ ಪದಾರ್ಥಗಳಲ್ಲಿ ಸತ್ತು ಬಿದ್ದಂತಹ ಪ್ರಾಣಿಗಳನ್ನು ತಿಂದು ಜೀವಿಸುವ ಈ ಗಿಡುಗ ಕೆಲವೊಮ್ಮೆ ಬೇಟೆಯಾಡಿಯೂ ತಿನ್ನುತ್ತದೆ. ಆಹಾರದ ಹುಡುಕಾಟಕ್ಕಾಗಿ ಹೆಚ್ಚಿನ ಸಮಯ ಆಗಸದಲ್ಲಿಯೇ ಎತ್ತರಕ್ಕೆ ಹಾರಿ ಅಲ್ಲೇ ಹಾರಾಡುತ್ತಿರುತ್ತದೆ; ಅಲ್ಲೇ ವೃತ್ತಾಕಾರದಲ್ಲಿ ಸುತ್ತಾಡುತ್ತಿರುತ್ತದೆ.
ಅವುಗಳ ಕೋನಾಕಾರದ ರೆಕ್ಕೆ ಹಾಗು ಸೀಳು ಬಾಲದಿಂದ ಸುಲಭವಾಗಿ ಇತರ ಜಾತಿಯ/ ಪ್ರಭೇದಗಳ ಗಿಡುಗಗಳಿಂದ ಪ್ರತ್ಯೇಕಿಸಬಹುದಾಗಿದೆ. ಯುರೋಪ್, ಆಸ್ಟ್ರೇಲಿಯಾ,ಓಶಿಯಾನ, ಯುರೇಶಿಯಾ ಮುಂತಾದ ಉಷ್ಣವಲಯ ಹಾಉ ಶೀತವಲಯಗಳಲ್ಲಿ ಕಂಡುಬಂದರೂ ಹೆಚ್ಚಾಗಿ ನಾವು ಈ ಹಕ್ಕಿಯನ್ನು ದ. ಏಷಿಯಾದಲ್ಲಿಯೇ ಕಾಣಬಹುದು.
ಉಷ್ಣವಲಯ/ಟೆಂಪರೇಟ್ ಝೋನ್ ನಲ್ಲಿ ಕಂಡು ಬರುವ ಪರೀಯಾಕೈಟ್ ಹೆಚ್ಚಾಗಿ ವಲಸೆ ಹೋಗುವ ಹಕ್ಕಿಯಾಗಿರುತ್ತದೆ.
ನೋಡಲು ಕಡು ಕಂದುಬಣ್ಣವಿರುವ ಈ ಹಕ್ಕಿ ಪೂರ್ವ ಪಾಕಿಸ್ತಾನ, ಭಾರತದ ದಕ್ಷಿಣ ಪೂರ್ವ ವಲಯ, ಶ್ರೀಲಂಕಾದಿಂದ ಈನ್ ಡೋಚೀನದಿಂದ ಮಲಯಿ ಪೆನೆನ್ ಸ್ಯುಲಾವರೆಗೂ ಕಾಣಬಹುದಾಗಿದೆ.