ಮಂಗಳೂರು(ಬಂಟ್ವಾಳ): ತಲೆ ದಿಂಬು ಹಾಗೂ ಹಾಸಿಗೆ ತಯಾರಿಕಾ ಫ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಜಿಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿನಲ್ಲಿ ನಡೆದಿದೆ.
ಸಜಿಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಫ್ಯಾಕ್ಟರಿ ಇದಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮೆಶಿನರಿಗಳು, ತಲೆದಿಂಬು, ಹಾಸಿಗೆಗಳು ಬೆಂಕಿಗೆ ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.