ಪ್ರಾಣಿ ಪ್ರಪಂಚ – 27

ಚಿರತೆ (Panthera pardus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇಂಡಿಯನ್‌ ಚಿರತೆಗಳು ಭಾರತದ ಉಪಖಂಡಗಳಲ್ಲಿ ಹೇರಳವಾಗಿ ಹರಡಿವೆ. ಪಂತೇರ ಪರ್‌ಡುಸ್‌ ಜಾತಿಯ ಈ ಚಿರತೆಗಳ ಸಂಖ್ಯೆಯು ದುರ್ಬಲವಾಗುತ್ತಿದ್ದು ಇದಕ್ಕೆ ಕಾರಣ ವಿಘಟನೆ, ಬೇಟೆಗಾರರು ಹೆಚ್ಚು ಬೇಟೆಯಾಡುತ್ತಿರುವುದು ಹಾಗೂ ಇದರ ಚರ್ಮ ಹಾಗೂ ದೇಹವನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿರುವುದು.

ಇಂಡಿಯನ್‌ ಚಿರತೆಗಳು ಐದು ದೊಡ್ಡ ಜಾತಿಯ ಬೆಕ್ಕುಗಳ ಗುಂಪಿನಲ್ಲಿ ಒಂದಾಗಿದ್ದು ಭಾರತದಲ್ಲಿ ದೊರೆಯುತ್ತಿವೆ. ಏಷ್ಯಾಟಿಕ್‌ ಸಿಂಹ, ಬೆಂಗಾಲ್‌ ಹುಲಿ, ಹಿಮದ ಚಿರತೆ ಹಾಗೂ ಚುಕ್ಕೆಗಳಿರುವ ಚಿರತೆಯ ಜಾತಿಯಿಂದ ಹೊರತಾಗಿವೆ. 1794ರಲ್ಲಿ ಫ್ರೈಡ್‌ರಿಚ್‌ ಆಲ್‌ ಬ್ರಿಜ್‌ ಆನ್‌ಟೆನ್‌ ಮೇಯರ್‌ (Fridrich Al bring unten Mayor) ಮೊದಲು ಈ ಫೆಲಿಸ್‌ ಫುಸ್‌ಕಾ ಬಗ್ಗೆ ವಿವರಣೆಯನ್ನು ಕೊಡುತ್ತಾ ಪೆಂತರ್‌ ಎಂಬ ಬೆಕ್ಕಿನ ಜಾತಿಗೆ ಸೇರಿದ ಬೆಂಗಾಲಿ ನಿಂದ ಬಂದುದೆಂದು, ಇವು 85.5 ಸೆಂ.ಮೀ ಉದ್ದವಿದ್ದು ಇದರ ಕಾಲುಗಳು ಅತ್ಯಂತ ಶಕ್ತಿಯುತವಾಗಿದ್ದು, ಉದ್ದದ ಬಾಲವನ್ನು ಹೊಂದಿದ್ದು, ಪೆಂತರ್‌ನಷ್ಟೇ ದೊಡ್ಡ ತಲೆಯನ್ನು ಹೊಂದಿದ್ದು, ಅಗಲವಾದ ಮೂತಿ, ಸಣ್ಣ ಕಿವಿ, ಸಣ್ಣ ಹಳದಿ ಮಿಶ್ರಿತ ಬೂದು ಬಣ್ಣದ ಕಣ್ಣುಗಳು ನೋಡಲು ಮೊದಲು ಕಪ್ಪು, ಬಣ್ಣದಂತೆ ಕಂಡರೂ ಹತ್ತಿರ ಹೋದಾಗ ಗಾಢ ಕಂದು ಬಣ್ಣ ಹಾಗೂ ಗಾಢ ಬಣ್ಣದ ಚುಕ್ಕೆಗಳು, ಕೆಳಗೆ ತಿಳಿ ಕೆಂಪು ಬಣ್ಣವನ್ನು ಹೊಂದಿದೆ ಎಂದು ವಿವರಿಸಿದ್ದಾರೆ. ಭಾರತದಲ್ಲಿ ಎಲ್ಲಾ ಪ್ರಾಂತ್ಯಗಳಲ್ಲೂ ಈ ಚಿರತೆಗಳು ಕಂಡುಬರುತ್ತವೆ. ನೇಪಾಳ, ಭೂತಾನ್‌, ಬಾಂಗ್ಲಾದೇಶ್‌ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ.

ಇವು ಮಳೆ ಬೀಳುತ್ತಿರುವ ಕಾಡುಗಳಲ್ಲಿ, ಒಣಗಿದ ಮರಗಳಿರುವ ಕಾಡುಗಳಲ್ಲಿ, ಸಮಶೀತೋಷ್ಣ ಕಾಡುಗಳಲ್ಲಿ, ಉತ್ತರದ ಕಾಡುಗಳಲ್ಲಿ, 2,500 ಮೀ. ಸಮುದ್ರದ ಮಟ್ಟಕ್ಕಿಂತ ಎತ್ತರವಿರುವ ಜಾಗಗಳಲ್ಲಿ ವಾಸಿಸುತ್ತವೆ. ಸುಂದರ ಬನದಲ್ಲಿರುವ ಮಾವಿನ ತೋಪುಗಳಲ್ಲಿ ಇವು ವಾಸ ಮಾಡುವುದಿಲ್ಲ.

 

LEAVE A REPLY

Please enter your comment!
Please enter your name here