ಮಂಗಳೂರು (ಬೆಂಗಳೂರು): ಏರೋನಿಕ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಣೀಂದ್ರ ಹಾಗೂ ಸಿ ಇ ಓ ವಿನು ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪಾರಿ ನೀಡಿದ್ದ ಆರೋಪದಲ್ಲಿ ಜಿ ನೆಟ್ ಕಂಪನಿ ಮಾಲಕ ಅರುಣ್ ಕುಮಾರ್ ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜುಲೈ 11 ರಂದು ನಡೆದಿದ್ದ ಕೊಲೆ ಸಂಬಂಧಿಸಿದ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು ಅರುಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಣಕಾಸಿನ ವ್ಯವಹಾರದ ವೈಶ್ಯಮ್ಯದಿಂದ ಕೊಲೆ ಮಾಡಲು ಅರುಣ್ ಸುಪಾರಿ ನೀಡಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಪರಾಧ ಕೃತ್ಯಕ್ಕೆ ಸಂಚು ಹಾಗೂ ಕೊಲೆ ಆರೋಪದಡಿ ಅರುಣ್ ನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ ಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ.