ಪ್ರಾಣಿ ಪ್ರಪಂಚ – 34

ಭಾರತದ ಗೂಬೆ(Bubio bengalensis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ದಕ್ಷಿಣ ಏಷಿಯಾದಲ್ಲಿ ಕಂಡುಬರುವ ಕೊಂಬಿರುವ ದೊಡ್ಡ ಗೂಬೆ. ಗುಡ್ಡಕಾಡು ಪ್ರದೇಶದಲ್ಲಿ ದಟ್ಟ ಪೊದೆ, ದಟ್ಟ ಮರಗಳಲ್ಲಿ, ನದಿತೀರದ ಇಳಿಜಾರು ಪ್ರದೇಶದ ಮರಗಳಲ್ಲಿ ಇರುತ್ತವೆ. ಸೂರ್ಯಾಸ್ತಮ ಹಾಗೂ ಸೂರ್ಯೋದಯದ ಮೊದಲು ಇವು ಕೂಗುವುದನ್ನು ನಾವು ಕೇಳಬಹುದು.

ನೋಡಲು ದೊಡ್ಡ ಚಪ್ಪಟ ಮುಖ, ದೊಡ್ಡ ದೊಡ್ಡ ಕಣ್ಗಳು, ತಲೆಯ ಮೇಲೆ ರೋಮಗಳು ಪುರುಚಿಲು, ದೇಹವು ಕಂದು ಹಾಗೂ ಬೂದು ಬಣ್ಣದ್ದಾಗಿದ್ದು ಕತ್ತಿನ ಭಾಗದಲ್ಲಿ ಬಿಳಿಯ ಮಚ್ಚೆ ಗುರುತು ಇದ್ದು ಅದರ ಮೇಲೆ ಉದ್ದುದ್ದ ಕಪ್ಪು ಗೀರುಗಳು ಕಾಣುತ್ತದೆ.

ಗಟ್ಟಿ ಹಿಡಿತ ಸಾಧಿಸಲು ಉದ್ದುದ್ದ ಉಗುರುಗಳು. ಮರಿಗಳು ಬಿಳಿಪುಕ್ಕಗಳನ್ನು ಹೊಂದಿದ್ದು ಬೆಳೆಯುತ್ತಿದ್ದಂತೆ ಇವು ಬಿಳಿಚುಕ್ಕಿಗಳಾಗಿ ಮಾರ್ಪಡುತ್ತದೆ. ಗೂಡು ಕಟ್ಟುವ ಕಾಲ ನವೆಂಬರ್‌ ನಿಂದ ಏಪ್ರಿಲ್‌ ವರೆಗೂ, 3-4 ಮೊಟ್ಟೆಗಳನ್ನಿಡುತ್ತದೆ. ಬಡಿ ಮಣ್ಣಿನ, ಮರಳಿನ ಮೇಲೆ ನದಿಯ ದಡಗಳಲ್ಲಿ ಬೆಟ್ಟ ಗುಡ್ಡಗಳ ತುದಿಗಳಲ್ಲಿ, ಪೊದೆಗಳ ಮಧ್ಯೆಯಲ್ಲಿ ಇಡಲಾಗುತ್ತದೆ. ಪ್ರತಿ ವರ್ಷವೂ ಈ ಜಾಗವನ್ನು ಮತ್ತೆ ಸಂತಾನೋತ್ಪತ್ತಿಗೆ ಉಪಯೋಗಿಸಲಾಗುತ್ತದೆ.

33 ದಿನಗಳಾದ ಬಳಿಕ ಮೊಟ್ಟೆಯೊಡೆದು ಮರಿಯಾಗಿ ಈ ಮರಿಗಳು ಸುಮಾರು 6 ತಿಂಗಳವರೆಗೂ ತಂದೆ ತಾಯಿ ಮೇಲೆ ಅವಲಂಬಿತ. ದೊಡ್ಡ ಗೂಬೆಗಳು ತನ್ನ ಗೂಡನ್ನು, ಮೊಟ್ಟೆ ಮರಿಗಳನ್ನು ಸಂರಕ್ಷಿಸಲು ಜಿಗ್-ಜಾಗ್‌ ಆಕಾರದಲ್ಲಿ ಹಾರಾಡುತ್ತಾ ಕಾಪಾಡುತ್ತದೆ.

ಮರಿಗಳು ಇತರೆ ಭಕ್ಷಕರಿಂದ ಕಾಪಾಡಿಕೊಳ್ಳಲು ಹಾವಿನಂತೆ ಬುಸು ಗುಟ್ಟಿ, ರೆಕ್ಕೆಗಳನ್ನು ಅಗಲಿಸುತ್ತವೆ. ಗಂಡು ಗೂಬೆಗಳು ದೀರ್ಘವಾಗಿ ಕೂಗುತ್ತಾ ಹೆಣ್ಣನ್ನು ಆಕರ್ಷಿಸುತ್ತವೆ. ಈ ಕೂಗು ಹೆಚ್ಚಾಗಿ ಫೆಬ್ರವರಿ ಮಾಸದಲ್ಲಿ ಕೇಳಿಬರುತ್ತದೆ.

ಆಹಾರ ಪದ್ಧತಿ: ಇಲಿಗಳು, ಹೆಗ್ಗಣ, ಪಾರಿವಾಳ, ಗುಬ್ಬಚ್ಚಿಗಳು, ಚಿಕ್ಕ ಹಕ್ಕಿಗಳು, ಮೊಲ, ಬಾವಲಿ ಇವುಗಳನ್ನು ತಿನ್ನುತ್ತದೆ.

LEAVE A REPLY

Please enter your comment!
Please enter your name here