ಮಂಗಳೂರು: ಮೂವರು ಕುಖ್ಯಾತ ಡ್ರಗ್‌ ಪೆಡ್ಲರ್‌ಗಳ ಬಂಧನ

ಮಂಗಳೂರು: ನಗರದಾದ್ಯಂತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪರಂಗಿಪೇಟೆ ಮೂಲದ ಪ್ರಸ್ತುತ ಕೃಷ್ಣಾಪುರ ಸುರತ್ಕಲ್‌ ನಿವಾಸಿ ಮೊಹಮ್ಮದ್ ನಿಯಾಜ್ (28), ತಲಪಾಡಿ ಕೆ.ಸಿ.ರೋಡ್ ನಿವಾಸಿ ನಿಶಾದ್ (31) ಮತ್ತು ಪಡೀಲ್‌ ಕಣ್ಣೂರು ನಿವಾಸಿ ಮಹಮ್ಮದ್ ರಝೀನ್ (24) ಎಂದು ಗುರುತಿಸಲಾಗಿದೆ. ಆರೋಪಿಗಳು ಉಳ್ಳಾಲ ತಾಲೂಕು ತಲಪಾಡಿ ಬಳಿ ಎರಡು ಕಾರಿನಲ್ಲಿ ಬಂದು ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳಿಂದ ಒಟ್ಟು 180 ಗ್ರಾಂ ತೂಕದ 9 ಲಕ್ಷ ರೂ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಫ್ಟ್ ಕಾರುಗಳು, 4 ಮೊಬೈಲ್ ಫೋನ್ ಗಳು, ಪಿಸ್ತೂಲ್-1, ಸಜೀವ ಗುಂಡು-1, ಡ್ರಾಗನ್ ಚೂರಿಗಳು-2, ಡಿಜಿಟಲ್ ತೂಕ ಮಾಪನ ಮತ್ತು ರೂ. 22,050 ನಗದು ವಶಪಡಿಸಿಕೊಳ್ಳಲಾಗಿದೆ. ಗೋವಾ, ಮುಂಬೈನಿಂದ ಎಂಡಿಎಂಎ ಖರೀದಿಸಿ ಇಲ್ಲಿಗೆ ಪೂರೈಕೆ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here