ರಾಯಗಢ ಭೂಕುಸಿತ – ಮೃತರ ಸಂಖ್ಯೆ 27ಕ್ಕೆ ಏರಿಕೆ-78 ಮಂದಿ ನಾಪತ್ತೆ

ಮಂಗಳೂರು(ರಾಯಗಢ): ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಷಲ್ವಾಡಿ ಉಪಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಅವಶೇಷಗಳಿಂದ ಮತ್ತೆ ಆರು ಮಂದಿಯ ಶವವನ್ನು ಶನಿವಾರ ಹೊರತೆಗೆಯಲಾಗಿದ್ದು, ದುರಂತದಲ್ಲಿ ಮಡಿದವರ ಸಂಖ್ಯೆ 27ಕ್ಕೇರಿದೆ. ಇನ್ನೂ 78 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಂತ ಕಠಿಣ ಕಣಿವೆ ಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ, ನಾಪತ್ತೆಯಾದ ವ್ಯಕ್ತಿಗಳ ಪತ್ತೆಗೆ ಪರಿಹಾರ ತಂಡಗಳು ಪ್ರಯತ್ನ ಮುಂದುವರಿಸಿವೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಬದುಕಿರುವ ಸಾಧ್ಯತೆ ಕಡಿಮೆಯಾಗಿದ್ದು, ಪರಿಹಾರ ಹಾಗೂ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಬೇಕೇ ಅಥವಾ ಸ್ಥಗಿತಗೊಳಿಸಬೇಕೇ ಎಂಬ ಬಗ್ಗೆ ಸೋಮವಾರ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪರಿಹಾರ ಮತ್ತು ರಕ್ಷಣಾ ತಂಡಗಳು ಶನಿವಾರ ಆರು ಮೃತದೇಹಗಳನ್ನು ಹೊರತೆಗೆದಿದ್ದು, 98 ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಉಪಗ್ರಾಮದಲ್ಲಿ ಕೇವಲ 229 ಜನರು ವಾಸಿಸುತ್ತಿದ್ದು, 16 ಮಂದಿ ಗ್ರಾಮಸ್ಥರು ಹಾಗೂ ಅವರ ಸಂಬಂಧಿಕರು ಸೇರಿ 78 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here