ಪ್ರೀತಿಗಾಗಿ ಗಡಿ ದಾಟಿದ ಭಾರತೀಯ‌ ಯುವತಿ ಅಂಜು

ಮಂಗಳೂರು(ನವದೆಹಲಿ): ಫೇಸ್‌ಬುಕ್‌‌ನಲ್ಲಿ ಪರಿಚಯವಾದ ಅಂಜು ಹಾಗೂ ನಸ್ರುಲ್ಲಾ ನಡುವೆ ಪ್ರೇಮಾಂಕುರವಾಗಿ, ಅದು ಈಗ ಮದುವೆ ಹಂತಕ್ಕೆ ತಲುಪಿದೆ. ತನ್ನ ಇನಿಯ ನಸ್ರುಲ್ಲ ನನ್ನು ಭೇಟಿಯಾಗಲು ಅಂಜು ಪಾಕಿಸ್ತಾನಕ್ಕೆ ತೆರಳಿದ್ದಾಳೆ.

ಪಬ್ ಜಿ ಮೂಲಕ ಪರಿಚಯವಾಗಿ ಇನಿಯನಿಗಾಗಿ ಭಾರತಕ್ಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದ ಸೀಮಾ ಹೈದರ್ ಪ್ರಕರಣಕ್ಕೂ, ಅಂಜು ಪ್ರಕರಣಕ್ಕೆ ಹೋಲಿಕೆ ಇದೆಯಾದರೂ ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರೆ, ಅಂಜು ಎಲ್ಲಾ ದಾಖಲೆ ಪತ್ರ ನೀಡಿ ವೀಸಾ ಪಡೆದು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪಾಕಿಸ್ತಾನದ ಖೈಬರ್ ಪಕ್ತಾಂಕ್ವಾ ಪ್ರಾಂತ್ಯದ ನಿವಾಸಿಯಾಗಿರುವ ನಸ್ರುಲ್ಲಾ ಹಾಗೂ ಭಾರತದ ಅಂಜು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ಪರಿಚಯ ಮೊಳಕೆಯೊಡೆದು ಪ್ರೀತಿಗೆ ತಿರುಗಿದೆ. ವರ್ಚುವಲ್ ರೋಮ್ಯಾನ್ಸ್ ಶುರುವಾಗಿದೆ. ಇವರಿಬ್ಬರ ಸಂಬಂಧ ಗಟ್ಟಿಯಾಗುತ್ತಿದ್ದಂತೆ ಅಂಜು ತನ್ನ ಇನಿಯನಿಗಾಗಿ ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿದ್ದಾಳೆ.

ಬದುಕಿದರೆ ನಸ್ರುಲ್ಲಾ ಜತೆ ಮಾತ್ರ ಬದುಕುವೆ ಎಂದು ನಿರ್ಧರಿಸಿದ ಅಂಜು, ನೇರವಾಗಿ ಎಲ್ಲಾ ದಾಖಲೆ ಪತ್ರ ಸಲ್ಲಿಸಿ ಪಾಕಿಸ್ತಾನಕ್ಕೆ ತೆರಳಲು ವೀಸಾಗೆ ಜೂನ್ 21ರಂದು ಅರ್ಜಿ ಹಾಕಿದ್ದಾಳೆ. ವೀಸಾ ಕೈಸೇರುತ್ತಿದ್ದಂತೆ ಅಂಜು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಎಲ್ಲಾ ದಾಖಲೆಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ ಅಂಜುವನ್ನು ಭದ್ರತಾ ಅಧಿಕಾರಿಗಳು ಹಲವು ಸುತ್ತಿನ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ನಸ್ರುಲ್ಲಾ ಭೇಟಿಯಾಗಿರುವ ಅಂಜು ಮದುವೆಯಾಗಲು ನಿರ್ಧರಿಸಿದ್ದಾಳೆ. ಆದರೆ ವಿಚಾರಣೆ ಬಾಕಿ ಇರುವುದರಿಂದ ಮದುವೆ ದಿನಾಂಕ ಇನ್ನೂ‌ ನಿಗದಿಯಾಗಿಲ್ಲ.

LEAVE A REPLY

Please enter your comment!
Please enter your name here