ಖ್ಯಾತ ಕೊಂಕಣಿ ಗಾಯಕ ಕ್ಲೋಡ್ ಡಿ’ ಸೋಜಾ ನಿಧನ

ಮಂಗಳೂರು: ಕೊಂಕಣಿ ಸಂಗೀತ ಲೋಕದ ಪ್ರಸಿದ್ಧ ಗಾಯಕ, ಗೀತಾರಚನೆಕಾರ ಮತ್ತು ಸಂಯೋಜಕ ಕ್ಲೋಡ್ ಡಿ’ಸೋಜಾ(67) ಅವರು ಜುಲೈ 24ರ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬರಹಗಾರ, ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದ ಕ್ಲೋಡ್, ಸಾಮಾಜಿಕ, ಐತಿಹಾಸಿಕ ಮತ್ತು ಧಾರ್ಮಿಕ ವಿಷಯಗಳ ಮೇಲೆ 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಕ್ಲೋಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ ‘ಸಂದೇಶ ಪ್ರಶಸ್ತಿ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ.

LEAVE A REPLY

Please enter your comment!
Please enter your name here