ಮಂಗಳೂರು(ನವದೆಹಲಿ): ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಜಿನ್ ನಿರ್ವಹಣೆ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾನಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಜು.25ರ ಸಂಜೆ ನಡೆದಿದ್ದು, ವಿಮಾನ ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕಂಪನಿ ಹೇಳಿದೆ. ಸ್ಥಳದಲ್ಲಿ ಲಭ್ಯವಿದ್ದ ಅಗ್ನಿಶಾಮಕ ಉಪಕರಣಗಳಿಂದ ಬೆಂಕಿಯನ್ನು ನಂದಿಸಲಾಗಿದೆ ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳವನ್ನೂ ಕರೆಯಲಾಗಿದ್ದು, ಘಟನೆಯಲ್ಲಿ ವಿಮಾನ ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಏರ್‌ಲೈನ್ಸ್ ಪ್ರಕಾರ, ಈ ಘಟನೆ ವೇಳೆ Q400 ವಿಮಾನದಲ್ಲಿ 78 ರಿಂದ 90 ಪ್ರಯಾಣಿಕರು ಕುಳಿತ್ತಿದ್ದರು. ಕಳೆದ ಮಾನ್ಸೂನ್ ಋತುವಿನಲ್ಲಿನ ಘಟನೆಗಳು ಮತ್ತು ಅಸಮರ್ಪಕ ನಿರ್ವಹಣೆಯ ಬಗ್ಗೆ ಹಿಂದಿನ ಅವಲೋಕನಗಳಿಂದ ಕಣ್ಗಾವಲು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.