ಮಂಗಳೂರು(ಬೆಂಗಳೂರು): ಸ್ನಾತಕೋತ್ತರ ಪದವಿ (ಎಂ.ಎಸ್) ಪಡೆಯಲು ಅಮೆರಿಕಕ್ಕೆ ತೆರಳಿದ್ದ ನನ್ನ ಮಗಳು ಚಿಕಾಗೋದ ರಸ್ತೆಗಳಲ್ಲಿ ಅನ್ನಕ್ಕಾಗಿ ಪರದಾಡುತ್ತಿದ್ದು ಆಕೆಯನ್ನು ಮರಳಿ ಭಾರತಕ್ಕೆ ಕರೆದುಕೊಂಡು ಬರುವಂತೆ ಆಕೆಯ ತಾಯಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಹೈದರಾಬಾದ್‌ನ ಸೈಯಿದಾ ಫಾತಿಮಾ ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ. ಇವರ ಪುತ್ರಿ 35 ವರ್ಷದ ಸೈಯಿದಾ ಜೈದಿ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
‘ನನ್ನ ಮಗಳು ಡೆಟ್ರಾಯಿಟ್‌ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 2022 ಆಗಸ್ಟ್‌ನಲ್ಲಿ ಅಮೆರಿಕಕ್ಕೆ ಹೋಗಿದ್ದಳು. ಆಕೆಯ ಬಳಿಯಿದ್ದ ಹಣ, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಊಟಕ್ಕೆ ಹಣವಿಲ್ಲದೆ ಹಸಿವಿನಿಂದ ಬಳಲುತ್ತಿದ್ದು, ರಸ್ತೆಗಳಲ್ಲಿ ತಿರುಗಾಡುತ್ತಿದ್ದಾಳೆ ಎಂದು ಅಲ್ಲಿರುವ ಹೈದರಾಬಾದಿ ಯುವಕರು ಫೋಟೊ, ವಿಡಿಯೊ ಕಳುಹಿಸಿದ್ದಾರೆ. ಆಕೆ ಖಿನ್ನತೆಗೆ ಒಳಗಾಗಿದ್ದು, ತಾವು ಮಧ್ಯ ಪ್ರವೇಶಿಸಿ ಮರಳಿ ಭಾರತಕ್ಕೆ ಆಕೆಯನ್ನು ಕರೆ ತನ್ನಿ‘ ಎಂದು ಮನವಿ ಮಾಡಿದ್ದಾರೆ. ಈ ಪತ್ರವನ್ನು ಬಿಆರ್‌ಎಸ್ ನಾಯಕ ಖಲೀಕುರ್ ರಹಮಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಚಿವ ಎಸ್ ಜೈಶಂಕರ್ ಅವರಿಗೆ ಖಲೀಕುರ್ ರಹಮಾನ್ ಅವರು ಪತ್ರವನ್ನೂ ಟ್ಯಾಗ್ ಮಾಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Ms.Syeda Lulu Minhaj Zaidi from Hyd went to pursue MS from TRINE University, Detroit was found in a very bad condition in Chicago, IL. Her mother has appealed @DrSJaishankar to bring back her daughter. Would appreciate the immediate help. @HelplinePBSK @IndiainChicago… pic.twitter.com/dh4M4nPwxZ
— Khaleequr Rahman (@Khaleeqrahman) July 25, 2023