ಮಂಗಳೂರು(ಉಡುಪಿ): ವಿದ್ಯಾರ್ಥಿನಿಯರ ಶೌಚಾಲಯ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಬುಧವಾರ ಉಡುಪಿಗೆ ಆಗಮಿಸಿದ್ದು ಇಂದು ಕಾಲೇಜಿಗೆ ಭೇಟಿ ನೀಡಿದ್ದಾರೆ.
ಐಬಿಯಲ್ಲಿ ತಂಗಿದ್ದ ಖುಷ್ಬೂ ಬೆಳಿಗ್ಗೆ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ತೆರಳಿದರು. ಈ ವೇಳೆ ಉಡುಪಿ ಎಸ್ಪಿ ಕೂಡ ಅವರಿಗೆ ಸಾಥ್ ನೀಡಿದರು. ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥೆ ರಶ್ಮೀ ಕೃಷ್ಣಪ್ರಸಾದ್ ಖುಷ್ಬೂ ಅವರಿಗೆ ಸ್ವಾಗತ ಕೋರಿ ಕಾಲೇಜಿಗೆ ಕರೆದೊಯ್ದರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಚಿತ್ರೀಕರಣ ನಡೆಸಿದ್ದರು ಎನ್ನಲಾದ ಸ್ಥಳಕ್ಕೆ ಖುಷ್ಬೂ ಅವರು ತೆರಳಿದರು. ಇಂದು ರಜೆ ಇರುವ ಕಾರಣ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಆಡಳಿತ ಮಂಡಳಿಯ ಜೊತೆ ಒಂದು ಗಂಟೆಗಳ ಕಾಲ ಅವರು ಮಾಹಿತಿ ಪಡೆದುಕೊಂಡರು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ