ಪ್ರಾಣಿ ಪ್ರಪಂಚ-44

ಹುಲಿ(Panthera tigris tigris)
ಮಕ್ಕಳಿಗಾಗಿ ವಿಶೇಷ ಮಾಹಿತಿ ಈ ಪ್ರಭೇದದ ಹುಲಿಗಳು ದಕ್ಷಿಣ ಏಷಿಯಾದ ಭಾರತದ ಬಂಗಾಳದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದು ನಮ್ಮ ರಾಷ್ಟ್ರಪ್ರಾಣಿ ಎಂಬ ಪ್ರಖ್ಯಾತಿಯನ್ನು ಹೊಂದಿದೆ. ರಾಷ್ಟ್ರಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಹುಲಿಗಳು ಈಗ ಅವಸಾನದ ಅಂಚಿನಲ್ಲಿದೆ/ ಈಗ ಭಾರತದಲ್ಲಿರುವ ಹುಲಿಗಳ ಸಂಖ್ಯೆ 1136 ಆಗಿದ್ದು ಅವುಗಳನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ. ನೋಡಲು ಭವ್ಯವಾಗಿರುವ ಹುಲಿಯು ಹಳದಿ ಅಥವ ಕೇಸರಿ ಬಣ್ಣದ ತುಪ್ಪಟವನ್ನು ಹೊಂದಿದ್ದು ಅದರ ಮೇಲೆ ಕಡು ಕಂದು ಅಥವ ಕಪ್ಪು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ.ಹೊಟ್ಟೆ ಹಾಗು ಬಲಿಷ್ಠ ಕಾಲುಗಳ ಒಳಭಾಗಗಳು ಬಿಳಿಬಣ್ಣ ಮತ್ತು ಬಾಲವು ಕೇಸರಿಯ ಮೇಲೆ ಕಪ್ಪು ವರ್ತಲಗಳನ್ನು ಹೊಂದಿರುತ್ತದೆ. ಗಂಡು ಹುಲಿಗಳು 270-310 ಸೆಂ.ಮೀ (110-120 ಇಂಚುಗಳು) ಉದ್ದವಿರುತ್ತದೆ. ಹಾಗು ಹೆಣ್ಣು ಹುಲಿಗಳು 94-104 ಇಂಚುಗಳು ಉದ್ದವಿರುತ್ತದೆ.(ಅಗಲ) 4-5 ಅಡಿ ಎತ್ತರವಿರುತ್ತವೆ,ಬಾಲವೇ 43 ಇಂಚುಗಳಿರುತ್ತವೆ. ಗಂಡುಹುಲಿ ಸುಮಾರು 221.2ಕೆ.ಜಿ ತೂಕವಿದ್ದರೆ ಹೆಣ್ಣು ಹುಲಿಯು 139.7ಕೆ.ಜಿ ತೂಕ ಹೊಂದಿರುತ್ತದೆ. ಸಮತಟ್ಟು ಪ್ರದೇಶ, ಹುಲ್ಲುಗಾಡು ಪ್ರದೇಶ, ಹರಿಧ್ವರ್ಣದ ಪ್ರದೇಶ, ಬೆಟ್ಟದ ಕಣಿವೆ, ತಪ್ಪಲುಗಳು, ನದಿ ತೀರ ಪ್ರದೇಶ,ಒಣಪ್ರದೇಶ ಹೀಗೆ ಎಲ್ಲಿ ಉತ್ತಮ ಆಹಾರ ಬೇಟೆಗೆ  ಸಿಗುವುದೋ ಅಲ್ಲೆಲ್ಲಾ ಹುಲಿಗಳು ಕಂಡುಬರುತ್ತವೆ. ಹುಲಿಗಳಿಗೆ ಕಾಡುಗಳು ವನ್ಯರಾಶಿಗಳು ಭೇಟೆಯಾಡಲೂ ಇಲ್ಲದಂತಾಗಿ ಅಸುನೀಗುತ್ತಿವೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಬಂಡೀಪುರ ಅಭಯಾರಣ್ಯ ಮತ್ತು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಪಿಲಿಕುಳ  ನಿಸರ್ಗಧಾಮದಲ್ಲಿ ಕಾಣಬಹುದು.ಕೇರಳದ ಪೆರಿಯಾರ್‌, ಕಾಲಕಡ್-ಮುಂಡುತುರಾಯಿ, ಪರಂಬಿಕುಲಂ ಅಭಯಾರಣ್ಯಗಳಲ್ಲಿ ಕಾಣಸಿಗುವುದು. ಆಂಧ್ರದ ಶ್ರೀಶೈಲಂ-ನಾಗಾರ್ಜುನ ಸಾಗರ ಹುಲಿ ಸಂರಕ್ಷಣಾ ಘಟಕದಲ್ಲಿ ಕಾಣಬಹುದು. ಉತ್ತರ ಭಾರತದಲ್ಲಿಯೂ ಹಲವಾರು ಸಂರಕ್ಷಣಾ ಘಟಕಗಳಿದ್ದು ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ ಪ್ರಮುಖ ಖ್ಯಾತಿಯನ್ನು ಹೊಂದಿದೆ.

LEAVE A REPLY

Please enter your comment!
Please enter your name here