ನಾಯಿಯಾಗುವ ಬಯಕೆ – ಪೋಷಾಕಿಗೆ 11 ಲಕ್ಷ ರೂ. ಖರ್ಚು ಮಾಡಿದ ಜಪಾನ್‌ನ ಟೊಕೊ

ಮಂಗಳೂರು(ಟೋಕಿಯೊ): ಮನುಷ್ಯನ ಆಸೆಗೆ ಮಿತಿ ಇಲ್ಲ. ಐಷಾರಾಮಿ ಬದುಕು ನಡೆಸಲು ಆಶಿಸುವ ಜನರ ನಡುವೆ ಇಲ್ಲೊಬ್ಬ ತನ್ನ ವಿಶಿಷ್ಟ ಆಸೆಯನ್ನು ಪೂರೈಸಿಕೊಂಡಿದ್ದಾನೆ. ಟೊಕೊ ಎಂಬ ಜಪಾನ್‌ ನಿವಾಸಿಗೆ ತಾನು ಒಂದು ದಿನವಾದರೂ ನಾಯಿಯಂತೆ ಬದುಕಬೇಕೆನ್ನುವ ಆಸೆ. ಪ್ರಾಣಿ ಪ್ರಿಯನಾಗಿರುವ ಟೊಕೊನ ಅಭಿಲಾಷೆಯನ್ನು ಜಪಾನ್‌ ನ ಝಪೆಟ್ ಕಂಪನಿ ಈಡೇರಿಸುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ ಟಿವಿ ಜಾಹೀರಾತುಗಳಿಗೆ, ಸಿನಿಮಾಗಳಿಗೆ, ಬಾಡಿ ಸೂಟ್, 3ಡಿ ಮಾದರಿಗಳನ್ನು ಸಿದ್ಧಪಡಿಸಿ ಅನುಭವವಿದ್ದ ಝಪೆಟ್‌ ಕಂಪೆನಿ ನೈಜತೆಗೆ ತೀರಾ ಹತ್ತಿರದ ನಾಯಿಯ ಪೋಷಾಕನ್ನು ಟೊಕೊಗಾಗಿ ಸಿದ್ಧಪಡಿಸಿದೆ. ಟೊಕೊ ಬಯಕೆಯಂತೆಯೇ ನಾಯಿಯ ಪೋಷಾಕು ಸಿದ್ಧಗೊಳಿಸಿದ್ದು ಈ ಪೋಷಾಕಿಗಾಗಿ ಟೊಕೊ 11.65 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಐ ವಾಂಟ್‌ ಟು ಬಿ ಆ್ಯನ್‌ ಎನಿಮಲ್ ಎಂಬ ಯೂಟ್ಯೂಬ್ ಚಾನಲ್ ಹೊಂದಿರುವ ಟೊಕೊ, 31 ಸಾವಿರ ಚಂದಾದಾರರನ್ನು ಹೊಂದಿದ್ದಾನೆ. ಆತನ ಒಂದು ವಿಡಿಯೊ ಸುಮಾರು 10 ಲಕ್ಷ ವೀಕ್ಷಣೆ ಕಂಡಿದೆ. ಹೀಗೆ ಪ್ರಾಣಿಯಾಗುವ ತನ್ನ ಬಾಲ್ಯದ ಬಯಕೆಯನ್ನು ಇತ್ತೀಚೆಗೆ ಟೊಕೊ ಮೆಲಕು ಹಾಕಿಕೊಂಡಿದ್ದಾನೆ. ನಾಯಿಯಂತೆಯೇ ರಸ್ತೆಯಲ್ಲಿ ಓಡಾಡಿದ ಟೊಕೊ, ನೋಡುಗರ ಹುಬ್ಬೇರಿಸಿದ್ದಾನೆ. ನಾಯಿ ರೂಪದ ಮನುಷ್ಯನಾಗಿದ್ದು ನನ್ನ ವೈಯಕ್ತಿಕ ಆಯ್ಕೆ ಎಂದು ಟೊಕೊ ತನ್ನ ಚಾನಲ್ ಮೂಲಕ ಹೇಳಿದ್ದಾನೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here