ಮುಸ್ಲಿಂ ಮಹಿಳೆಯರಿಗೆ ರಾಖಿ ಕಟ್ಟಲು ಬಿಜೆಪಿ ಸಂಸದರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ

ಮಂಗಳೂರು(ಹೊಸದಿಲ್ಲಿ): ತ್ರಿವಳಿ ತಲಾಕ್ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮದಿಂದ ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚು ಭದ್ರತೆಯ ಭಾವನೆ ಮೂಡಿದ್ದು, ಬಿಜೆಪಿ ಮುಖಂಡರು ಈ ಬಾರಿಯ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರ ಬಳಿಗೆ ತೆರಳಿ ರಕ್ಷಾಬಂಧನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಹಿಂದುಳಿದ ಮುಸ್ಲಿಮರನ್ನು ತಲುಪಲು ಪಕ್ಷ ಕಾರ್ಯಯೋಜನೆ ಹಮ್ಮಿಕೊಂಡಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ಬಿಜೆಪಿ ನೇತೃತ್ವದ ಸಂಸದರ ತಂಡ ಸೋಮವಾರ ರಾತ್ರಿ ಭೇಟಿ ನೀಡಿದ ವೇಳೆ ಮೋದಿ ಈ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿ ಸರ್ಕಾರ ಕೈಗೊಂಡ ಉಪಕ್ರಮಗಳ ಬಗ್ಗೆ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಮನವರಿಕೆ ಮಾಡಿದರು ಎನ್ನಲಾಗಿದೆ. ಸಮಾಜದ ಎಲ್ಲ ವರ್ಗಗಳ ಜತೆ ಸಮನ್ವಯ ಸಾಧಿಸುವಂತೆ ಮೋದಿ ಸಲಹೆ ಮಾಡಿದ್ದಾಗಿ ನಿಯೋಗದಲ್ಲಿದ್ದ ಸಂಸದರೊಬ್ಬರು ಹೇಳಿದ್ದಾರೆ. ತ್ರಿವಳಿ ತಲಾಕ್ ನಿಷೇಧಿಸುವ ಮುಸ್ಲಿಂ ಮಹಿಳೆಯರ ವಿವಾಹಕ್ಕೆ ಸಂಬಂಧಿಸಿದ ಹಕ್ಕುಗಳ ರಕ್ಷಣೆ ಕಾಯ್ದೆಯನ್ನು 2019ರಲ್ಲಿ ಸಂಸತ್ತು ಆಂಗೀಕರಿಸಿತ್ತು. ತಮ್ಮ ಇತ್ತೀಚಿನ ಮನ್ ಕಿ ಬಾತ್‍ನಲ್ಲಿ ಕೂಡಾ ಮುಸ್ಲಿಂ ಮಹಿಳೆಯರ ಪರವಾಗಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳನ್ನು ಉಲ್ಲೇಖಿಸಿದ್ದರು. 4000 ಮುಸ್ಲಿಂ ಮಹಿಳೆಯರು ಮಹ್ರಂ ವಿವಾಹ ಸಂಬಂಧ ನಿಷಿದ್ಧವಾದವರು ಇಲ್ಲದೇ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ದೊಡ್ಡ ಬದಲಾವಣೆ ಎಂದು ಬಿಂಬಿಸಿದ್ದರು.

LEAVE A REPLY

Please enter your comment!
Please enter your name here