ಪ್ರಾಣಿ ಪ್ರಪಂಚ-48

ಮಂಡಲದ ಹಾವು (Daboia russelii)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಜಾತಿಯ ಹಾವುಗಳು ತೀವ್ರ ವೈರದ ಸ್ವಭಾವದ ಪ್ರಾಣಿಗಳಾಗಿದ್ದು ಹೆಚ್ಚಾಗಿ ನೆಲಪ್ರದೇಶದಲ್ಲಿ ವಾಸಿಸುವ ಹಾವಿನ ಕುಟುಂಬಕ್ಕೆ ಸೇರಿವೆ. ಭಾರತದಿಂದ ಹಿಡದು ತೈವಾನ ಮತ್ತು ಜಾವಾವರೆಗೆ ಇವು ನೆಲೆಸಿವೆ, ಬಯಲು ಪ್ರದೇಶಗಳಲ್ಲಿ ಇವು ಹೆಚ್ಚಾಗಿ ವಾಸಿಸುತ್ತವೆ. ಇವು ಕೃಷಿ ಭೂಮಿಗಳಲ್ಲಿ ಹೆಚ್ಚಾಗಿರುವುದರಿಂದ ಮನುಷ್ಯ ಸಂಪರ್ಕದಲ್ಲಿರುತ್ತವೆ. ಹೀಗಾಗಿ ಹಾವುಗಳಿಂದ ಕಚ್ಚಿಕೊಂಡು ಸಾಯುವವರ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಈ ಹಾವು ಐದು ಅಡಿ ಉದ್ದ ಬೆಳೆಯುತ್ತದೆ. ಅವುಗಳ ಮೈಮೇಲೆ ಮೂರು ಸಾಲು ಕೆಂಪು ಛಾಯೆಯ ಕಂದುಬಣ್ಣದ ಚುಕ್ಕೆಗಳಿರುತ್ತವೆ, ಕೆಲವು ಕಪ್ಪು ಬಿಳಿ ಚುಕ್ಕೆಗಳು ಹೊರಭಾಗದಲ್ಲಿರುತ್ತವೆ. ಈ ಹಾವು ಮೊಟ್ಟೆಗಳನ್ನಿಡುವುದಿಲ್ಲ, ಆದರೆ 25ಕ್ಕಿಂತ ಹೆಚ್ಚು ಮರಿಗಳಿಗೆ ಹೆಣ್ಣು ಹಾವು ಜನ್ಮ ವೀಯುತ್ತದೆ.

ಇವುಗಳ ವಾಸಸ್ಥಾನವು ಯಾವುದೇ ಪ್ರದೇಶಕ್ಕೂ ಸೀಮಿತವಾಗಿಲ್ಲ. ಹೆಚ್ಚಾಗಿ ಬಯಲುಗಳಲ್ಲಿ, ಹುಲ್ಲುಪೊದೆಯ ಚಿಕ್ಕ ಅಡವಿಗಳಲ್ಲಿ, ಸಾಗುವಳಿ ಭೂಮಿಯಲ್ಲಿ, ನೀಲಗಿರಿ ತೋಟಗಳಲ್ಲಿ, ಪೊದೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ, ಹುಲ್ಲುಗಾವಲಿನಲ್ಲಿ, ತೋಟಗಳಲ್ಲಿ, ಮರಳು ಪ್ರದೇಶದಲ್ಲಿ, ಕಲ್ಲಿನ ಬೆಟ್ಟಗಳಲ್ಲಿ, ವಾಸಿಸುತ್ತವೆ. ಹಾವುಗಳು ದಟ್ಟ ಅರಣ್ಯ, ತೇವ ಪ್ರದೇಶಗಳಲ್ಲಿ ವಾಸ ಮಾಡುವುದಿಲ್ಲ. ಬೇಸಿಗೆಗಾಲದಲ್ಲಿ ಇವುಗಳು ಗೆದ್ದಲು ಹುಳುವಿನ ಹುತ್ತದಲ್ಲಿ, ಇಲಿಗಳ ಬಿಲದಲ್ಲಿ ಅಡಗಿ ಕೂಡುತ್ತವೆ. ರಾತ್ರಿಯಲ್ಲಿ ಈ ಹಾವುಗಳು ಅಡ್ಡಾಡುತ್ತವೆ. ನಿಧಾನವಾಗಿ ಚಲಿಸುತ್ತ ಬಲೆಗೆ ಬೀಳುವ ವಿಷಯುಕ್ತ ಹಲ್ಲಿ ಮತ್ತು ಕಪ್ಪೆಗಳನ್ನು ತಿನ್ನುತ್ತವೆ. ಮುಸ್ಸಂಜೆಯಲ್ಲಿ ಇವು ಕ್ರಿಯಾಶೀಲವಾಗಿರುತ್ತವೆ. ಚಳಿಗಾಲದಲ್ಲಿ ಇನ್ನು ಚಟುವಟಿಕೆಯಿಂದಿರುತ್ತವೆ. ಹಗಲು ವೇಳೆಯಲ್ಲಿ ಬಯಲಿನಲ್ಲಿ ಸುರುಳಿ ಸುತ್ತಿಕೊಂಡು ಮಲಗಿರುತ್ತವೆ. ತಿಳಿ ಕಂದು ಅಥವಾ ಮಾಸಲು ಬಣ್ಣದ ಚರ್ಮದ ಮೇಲೆ ಅಂಡಾಕೃತಿಯ ಮಚ್ಚೆಗಳು ಸಮರಸಗೊಂಡಿವೆ, ಒಣ ಹುಲ್ಲುಗಾವಲಿನಲ್ಲಿ ಇರುತ್ತದೆ. ಕೆಲವು ಸಲ ಅವು ಚಿಕ್ಕ ಗಿಡವನ್ನೇರುತ್ತವೆ.

LEAVE A REPLY

Please enter your comment!
Please enter your name here