ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಸೆರೆ ಹಿಡಿದ ಮೊದಲ ಚಿತ್ರ ಬಿಡುಗಡೆ

ಮಂಗಳೂರು (ನವದೆಹಲಿ): ಚಂದ್ರಯಾನ-3 ಚಂದ್ರನ ಕಕ್ಷೆ ಪ್ರವೇಶಿಸಿರುವ ಬಾಹ್ಯಾಕಾಶ ನೌಕೆ ಸೆರೆ ಹಿಡಿದಿರುವ ಚಂದ್ರನ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆಗೊಳಿಸಿದೆ.

ಇಸ್ರೋ ಚಂದ್ರನ ಫೋಟೋವನ್ನು ಎಕ್ಸ್‌(ಟ್ವಿಟರ್‌)ನಲ್ಲಿ ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಿದೆ. ಇನ್ನು ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ -3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ ಎಂದು ಮಿಷನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here