ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಲು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಸೂಚನೆ – ಯುದ್ಧಕ್ಕೆ ತಯಾರಿಯೇ ?

ಮಂಗಳೂರು(ಸಿಯೋಲ್): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಅವರು ತನ್ನ ಮಿಲಿಟರಿಯ ಹಿರಿಯ ಜನರಲ್ ರನ್ನು ವಜಾಗೊಳಿಸಿದ್ದು, ಮುಂದೆ ಬರಬಹುದಾದ ಯುದ್ಧಕ್ಕೆ ಹೆಚ್ಚಿನ ಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ ಮತ್ತು ಮಿಲಿಟರಿ ಡ್ರಿಲ್ಸ್ ಗಳನ್ನು ವಿಸ್ತರಿಸಿ ಎಂದು ಕಿಮ್ ಜಾಂಗ್ ಹೇಳಿದ್ದು, ಉತ್ತರ ಕೊರಿಯಾದ ಶತ್ರುಗಳನ್ನು ತಡೆಯಲು ಕ್ರಮಗಳ ಯೋಜನೆಗಳನ್ನು ಚರ್ಚಿಸಿದ ಕೇಂದ್ರೀಯ ಮಿಲಿಟರಿ ಆಯೋಗದ ಸಭೆಯಲ್ಲಿ ಕಿಮ್ ಈ ಮಾತುಗಳನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ಅವರು ವೆಪನ್ ಫ್ಯಾಕ್ಟರಿಗೆ ಭೇಟಿ ನೀಡಿದ್ದು, ಅಲ್ಲಿ ಹೆಚ್ಚು ಕ್ಷಿಪಣಿ ಎಂಜಿನ್‌ ಗಳು, ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಸೂಚಿಸಿದ್ದರು. ಉತ್ತರ ಕೊರಿಯಾ ದೇಶವು ಉಕ್ರೇನ್ ವಿರುದ್ಧದ ಯುದ್ದಕ್ಕೆ ರಷ್ಯಾಕ್ಕೆ ಫಿರಂಗಿ ಶೆಲ್ ಗಳು, ರಾಕೆಟ್‌ ಗಳು ಮತ್ತು ಕ್ಷಿಪಣಿಗಳನ್ನು ಸರಬರಾಜು ಮಾಡುತ್ತಿದೆ ಎಂದು ಯುಎಸ್ಎ ಆರೋಪಿಸಿತ್ತು.

LEAVE A REPLY

Please enter your comment!
Please enter your name here