ಮ್ಯಾಕೊ ಕೋ–ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ 3ನೇ ಬಾರಿಗೆ ಐವನ್ ಡಿ’ಸೋಜಾ ಆಯ್ಕೆ

ಮಂಗಳೂರು: ಮಂಗಳೂರಿನ ಮ್ಯಾಕೊ ಕೋ–ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ.ವಕ್ತಾರ ಹಾಗೂ ಸುಳ್ಯದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಪ್ರಮುಖ ಕಾರ್ಮಿಕ ವರ್ಗವಾದ ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘವಾಗಿರುವ ಮ್ಯಾಕೊ 1975 ರಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ದಿವಂಗತ ಬ್ಲೇಸಿಯಸ್ ಎಂ.ಡಿ’ಸೋಜಾ ಸ್ಥಾಪಕಾಧ್ಯಕ್ಷರಾಗುವ ಮೂಲಕ ಮಂಗಳೂರಿನ ಬಲ್ಮಠದಲ್ಲಿ ಪ್ರಾರಂಭಗೊಂಡಿತ್ತು. ಪೆಟ್ರೋಲ್ ಬಂಕ್ ಹಾಗೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯೊಂದಿಗೆ ಕಳೆದ 48 ವರ್ಷಗಳಿಂದ ಮ್ಯಾಕೊ ಸೊಸೈಟಿಯು ಕಾರ್ಯನಿರ್ವಹಿಸುತ್ತಿದೆ.

LEAVE A REPLY

Please enter your comment!
Please enter your name here