ಮಣಿಪುರದಲ್ಲಿ ಭಾರೀ ಭೂ ಕುಸಿತ-ರಸ್ತೆ ಮಧ್ಯೆ ಸಿಲುಕಿದ 500 ವಾಹನಗಳು

ಮಂಗಳೂರು(ಮಣಿಪುರ): ಮಳೆಯಿಂದಾಗಿ ಮಣಿಪುರದ ನೋನಿ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಇಂಫಾಲ್-ಸಿಲ್ಚಾರ್ ಹೆದ್ದಾರಿಯನ್ನು ನಿರ್ಬಂಧಿಸಲಾಗಿದ್ದು, ಕನಿಷ್ಠ 500 ಸರಕು ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾಂಗ್ ಮತ್ತು ಅವಾಂಗ್‌ಖುಲ್ ಭಾಗ 2, ಖೋಂಗ್‌ಸಾಂಗ್ ಮತ್ತು ಅವಾಂಗ್‌ಖುಲ್ ಮತ್ತು ರಂಗ್‌ಖುಯಿ ಗ್ರಾಮದ ನಡುವಿನ ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆಯನ್ನು ತೆರವುಗೊಳಿಸಿ, ಸಂಚಾರವನ್ನು ಪುನರಾರಂಭಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಭೂಕುಸಿತಕ್ಕೆ ಕಾರಣವಾಗಿದೆ, ಭೂಕುಸಿತದಿಂದಾಗಿ ಕನಿಷ್ಠ 500 ಸರಕು ವಾಹನಗಳು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿವೆ ಎಂದು ಅವರು ಹೇಳಿದರು. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಭೂಕುಸಿತದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಉಂಟಾಗಲಿದ್ದು, ಜನಜೀವನ ಮತ್ತಷ್ಟು ಅಸ್ಥವ್ಯಸ್ಥಗೊಳ್ಳಲಿದೆ.

LEAVE A REPLY

Please enter your comment!
Please enter your name here