ಮಂಗಳೂರು(ನಾಗ್ಪುರ): ಮುಂಬೈನಿಂದ ರಾಂಚಿಗೆ ಹೋಗುತ್ತಿದ್ದ ಇಂಡಿಗೊ ವಿಮಾನದಲ್ಲಿ 62 ವರ್ಷದ ಪ್ರಯಾಣಿಕರೊಬ್ಬರು ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಪ್ರಯಾಣಿಕನ ಆರೋಗ್ಯ ಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಬೇಕಾಯಿತು. ನಾಗ್ಪುರ ವಿಮಾಣ ನಿಲ್ದಾಣದಲ್ಲಿ ತುರ್ತು ಆರೋಗ್ಯ ಚಿಕಿತ್ಸೆಗಾಗಿ ನಿಯೋಜಿಸಿದ್ದ ಕಿಮ್ಸ್-ಕಿಂಗ್ಸ್ವೇ ಆಸ್ಪತ್ರೆಯ ವೈದ್ಯಕೀಯ ತಂಡ ಪ್ರಯಾಣಿಕನ ತಪಾಸಣೆ ನಡೆಸಿ, ಕ್ಷಯ ಹಾಗೂ ತೀವ್ರತರ ಕಿಡ್ನಿ ಕಾಯಿಲೆಯಿಂದ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.