ಯುವತಿ ಸ್ನಾನ ಮಾಡುವಾಗ ಮೊಬೈಲ್‌ ನಲ್ಲಿ ವಿಡಿಯೋ ರೆಕಾರ್ಡಿಂಗ್ – ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು(ಬಂಟ್ವಾಳ): ಯುವತಿಯೋರ್ವಳು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವ ವೇಳೆ ಅಪರಿಚಿತ ವ್ಯಕ್ತಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ‌ ಹಂಚಿನ ಮನೆಯ ಬಚ್ಚಲು ಕೋಣೆಯಲ್ಲಿ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೋಡೆಯ ಸೆರೆಯ ಮಧ್ಯೆ ಮೊಬೈಲ್ ಮೂಲಕ ಸ್ನಾನ ಮಾಡುತ್ತಿರುವುದನ್ನು ಸೆರೆ ಹಿಡಿಯುವುದು ಗಮನಕ್ಕೆ ಬಂದಿದೆ. ಇದನ್ನು ಕಂಡ ಯುವತಿ ಜೋರಾಗಿ ಕಿರುಚಿದ್ದು, ಅಪರಿಚಿತ ವ್ಯಕ್ತಿಯು ಅಲ್ಲಿಂದ ಓಡಿಹೋಗಿದ್ದಾನೆ.

ಯುವತಿಯ ಬೊಬ್ಬೆ ಕೇಳಿ ತಾಯಿ ಹಾಗೂ ನೆರೆಮನೆಯವರು ಓಡಿ ಬಂದು ವಿಷಯ ಕೇಳಿ, ಓಡಿಹೋದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಪತ್ತೆಯಾಗಿರಲಿಲ್ಲ. ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಅಗ್ರಾರ್ ನಿವಾಸಿ ಜಗದೀಪ್ ಆಚಾರ್ಯ ಎಂಬವನನ್ನು ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ ಎಂಬುವುದಾಗಿ ತಿಳಿದು ಬಂದಿದೆ. ಈತನ ಈ ಕೆಟ್ಟ ಚಾಳಿಯ ಬಗ್ಗೆ ಪೋಲೀಸರು ತನಿಖೆ ಮುಂದುವರಿಸಿದ್ದು, ಈತನಿಂದ ಇಂತಹ ಕೃತ್ಯಗಳು ಬೇರೆ ಎಲ್ಲಿಯಾದರೂ ಆಗಿದೆಯಾ ಅನ್ನುವ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿಯಬಹುದಾಗಿದೆ.

LEAVE A REPLY

Please enter your comment!
Please enter your name here