ಮಂಗಳೂರು (ದೆಹಲಿ ): ದೇಶದ ಜನತೆಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದ್ದು 14 ಕೆಜಿ ಎಲ್ ಪಿ ಜಿ ಸಿಲಿಂಡರ್ ಗೆ ರೂ.200 ಸಬ್ಸಿಡಿ ಘೋಷಿಸಿದೆ. ಮಂಗಳವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಈ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗುವುದಿಲ್ಲ ಬದಲಾಗಿ ಸರ್ಕಾರಿ ಸೌಮ್ಯದ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳಿಗೆ ಸಬ್ಸಿಡಿ ಹಣ ಸಿಗಲಿದೆ. ತೈಲ ಕಂಪನಿಗಳಿಗೆ ಹಣ ನೇರವಾಗಿ ಪಾವತಿಯಾಗುವ ಕಾರಣ ಖರೀದಿಸುವಾಗಲೇ 200 ರೂಪಾಯಿ ಕಡಿತಗೊಳ್ಳಲಿದೆ. ರಾಜಸ್ಥಾನ, ಛತ್ತೀಸ್ಗಡ್ ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂನಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕೇಂದ್ರದಿಂದ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ ಎನ್ನಲಾಗಿದೆ.