ಖಾಸಗಿ ಬಸ್ ಗಳಿಗೆ ಡೋರ್ ಕಡ್ಡಾಯ – ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಆದೇಶ

ಮಂಗಳೂರು: ಮಂಗಳೂರಿನಲ್ಲಿ ಖಾಸಗಿ ಬಸ್ ನಿರ್ವಾಹಕ ಓರ್ವ ಫುಟ್ ಬೋರ್ಡ್ ನಲ್ಲಿ ನಿಂತುಕೊಂಡಿದ್ದು, ಟರ್ನ್ ಸಂದರ್ಭದಲ್ಲಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆಯೊಂದು ನಂತೂರಿನಲ್ಲಿ ನಡೆದಿತ್ತು.

ಹಾಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು ಹೊಸ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ಎಲ್ಲಾ ಬಸ್ ಗಳಿಗೆ ಡೋರ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ. ಕಂಡಕ್ಟರ್ ಸೇರಿ ಯಾರೂ ಕೂಡಾ ಫುಟ್ ಬೋರ್ಡ್ ನಲ್ಲಿ ನಿಲ್ಲುವಂತಿಲ್ಲ, ಸಮಯ ಫಾಲೋ ಮಾಡಬಾರದು, ಸೇಫ್ಟಿ ಮುಖ್ಯ ಎಂಬ ಮಾತನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here