ಲೆಮ್ಮಿಂಗ್ (Lemmus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ತೀರಾ ಚಿಕ್ಕ ಆಕಾರದ ಈ ದಂಶಕವು (ಕಚ್ಚುವ) ಹೆಚ್ಚಾಗಿ ಉತ್ತರ ಧ್ರುವ ಪ್ರದೇಶದ ಹತ್ತರ ಕಂಡು ಬರುತ್ತದೆ. ಅತ್ಯಂತ ಚಿಕ್ಕ ಮಾದರಿಗೆ ಸೇರಿದ ಲೆಮ್ಮಿಂಗ್ ಎನ್ನುತ್ತಾರೆ. ಇದು 8ಸೆಂ.ಮೀ ಉದ್ದವಿರುತ್ತದೆ. ನಾರ್ವೆ ಲೆಮ್ಮಿಂಗ್ ಇದಕ್ಕಿಂತ ಮೂರು ಪಟ್ಟು ದೊಡ್ಡದು ಹಾಗೂ ಲೆಮ್ಮಿಂಗ್ ಗುಂಪಿನಲ್ಲಿಯೇ ದೊಡ್ಡದು.
ಲೆಮ್ಮಿಂಗ್ ಶೀತಕಾಲವನ್ನು ತಡೆಯಲಾರವು, ಆದರೂ ಉತ್ತರ ಧ್ರುವದ ಚಳಿಯನ್ನು ತಾಳಿಕೊಳ್ಳುತ್ತವೆ. ಮೈಮೇಲಿನ ದಪ್ಪಪೊರೆಯು ಚಳಿಯಿಂದ ಕಾಪಾಡುತ್ತದೆ, ಚಳಿಗಾಲದಲ್ಲಿ ಅವು ಚಿಗುರು ಗೆಡ್ಡೆಗಳನ್ನು ಹುಡುಕುತ್ತಾ ತಿನ್ನುತ್ತದೆ.
ಲೆಮ್ಮಿಂಗ್ ತಿನ್ನುವ ಆಹಾರವು ಪೌಷ್ಟಿಕವಾಗಿರುವುದಿಲ್ಲ. ಹೀಗಾಗಿ ಅವು ಹೆಚ್ಚಿಗೆ ತಿನ್ನಬೇಕಾಗುತ್ತದೆ. ದಿನಕ್ಕೆ ಆರು ಗಂಟೆಕಾಲ ಆಹಾಕ್ಕಾಗಿ ಹುಡುಕಬೇಕಾಗುತ್ತದೆ, ಬೇಟೆಯ ನಂತರ ವಿಶ್ರಾಂತಿ ಪಡೆಯುತ್ತವೆ. ತಮ್ಮ ಮೈಯನ್ನು ಬೆಚ್ಚುಗಿಡಲು ಮತ್ತು ಬೇಟೆಯಾಡುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಲೆಮ್ಮಿಂಗ್ ಹಿಮದ ತಳದ ಬಿಲದಲ್ಲಿ ವಾಸಿಸುತ್ತವೆ.