ನೂತನ ಸಚಿವರಿಗೆ ನೂತನ ಕಾರು – 9 ಕೋಟಿ ವೆಚ್ಚ

ಮಂಗಳೂರು(ಬೆಂಗಳೂರು): ರಾಜ್ಯ ಸರ್ಕಾರದ 33 ನೂತನ ಸಚಿವರಿಗೆ ಹೊಸ ಕಾರನ್ನು ಖರೀದಿಸಲು ನಿರ್ಧರಿಸಿದೆ.

ಈ ಬಗ್ಗೆ ಈಗಾಗಲೇ ಆಯವ್ಯಯ ಸಿದ್ಧಪಡಿಸಿ, ನಿರ್ಧಾರ ಕೈಗೊಂಡಿರುವ ಸರ್ಕಾರ, ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದೆ. ಒಟ್ಟು 9 ಕೋಟಿ 90 ಲಕ್ಷ ರೂ. ವೆಚ್ಚದಲ್ಲಿ 30 ಲಕ್ಷ ರೂ ಬೆಲೆಯ 33 ಇನ್ನೋವಾ ಹೈಕ್ರಾಸ್ ಕಾರುಗಳನ್ನು ಸರ್ಕಾರ ಖರೀದಿ ಮಾಡಲಿದೆ. 4 ಜಿ ವಿನಾಯಿತಿಯೊಂದಿಗೆ ನೇರವಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯೇ ಕಾರುಗಳನ್ನು ಪೂರೈಸಲಿದೆ.

LEAVE A REPLY

Please enter your comment!
Please enter your name here