ಮ್ಯಾನಟೀಸ್ (Hydrodamalis gigas)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಆಫ್ರಿಕಾ, ದ.ಅಮೇರಿಕಾ, ಉ. ಆಸ್ಟ್ರೇಲಿಯಾ ಕರಾವಳಿ ಪ್ರದೇಶ, ಅಮೇಜಾನ್ ನದಿ ತೀರ ಪ್ರದೇಶ ಇಂಥ ಪ್ರಾಂತ್ಯಗಳಲ್ಲಿ ಕಂಡುಬರುವ ಮೆನಾಟೀಸ್ ನೋಡಲು ದೂರದಿಂದ ಸಾಗರಿ/ಸಾಗರಕನ್ಯೆಯಂತೆ ಕಂಡುಬರುತ್ತದೆ.
ಮೆನಾಟೀಸ್ ಒಂದು ಜಲಚರ ಉಭಯವಾಸಿ ಪ್ರಾಣಿ, ಸಸ್ಯಹಾರಿ. ನೀರಿರುವ ಪ್ರದೇಶಗಳಲ್ಲಿ ನದಿಯ ತಳದಲ್ಲಿನ ಹುಲ್ಲು, ಪಾಚಿ, ಪೈರು, ನೀರಿನ ಗಿಡಗಳನ್ನು ತಿಂದು ಬದುಕುತ್ತದೆ. ನಿಧಾನ ನಡೆ, ಸೂಕ್ಷ್ಮ ಜೀವಿಗಳಾದ ಮೆನಾಟೀಸ್ 60 ವರ್ಷಗಳ ಕಾಲ ಬದುಕುತ್ತದೆ. 12 ಅಡಿ ಎತ್ತರಕ್ಕೆ ಬೆಳೆಯುತ್ತದೆ. 500 ಕೆ.ಜಿ. ತೂಕವಿರುತ್ತದೆ.
ಹೆಚ್ಚು ಕಾಲ ಬದುಕಿದರೂ 4-5 ವರ್ಷಕ್ಕೆ ಒಮ್ಮೆ ಮಾತ್ರ ಒಂದೇ ಮರಿ ಹಾಕುವುದರಿಂದ ಇವುಗಳ ಸಂಖ್ಯೆ ಹಾಗೂ ಸಂತತಿ ಕಡಿಮೆ. ಫ್ಲೋರಿಡಾ ಪ್ರದೇಶದಲ್ಲಿ ಮಾತ್ರ 2,600 ಮೆನಾಟೀಸ್ ಜಲಚರ ಪ್ರಾಣಿಗಳು ಕಂಡುಬಂದಿದೆ. ಮೆನಾಟೀಸ್ ಗಳು ಹೆಚ್ಚಾಗಿ ಏಕಾಂಗಿ ಸಂಚಾರಿಗಳು. ಮೆಟಾಟೀಸ್ ಗಳು ಸಲಹೆ ಹೋಗುವಂಥ ಜಲಚರಗಳು.