ಜೀವನದಲ್ಲಿ ಜಿಗುಪ್ಸೆ – ತಲಪಾಡಿ ನಾರ್ಲಾ ನಿವಾಸಿ ಯುವಕ ಪೈಝಲ್ ಆತ್ಮಹತ್ಯೆ

ಮಂಗಳೂರು(ಉಳ್ಳಾಲ): ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ನಾರ್ಲಾ ಬಳಿ ಸೆ.5ರಂದು ವರದಿಯಾಗಿದೆ.

ತಲಪಾಡಿ ಗ್ರಾಮದ ನಾರ್ಲ, ಪಡೀಲ್ ನಿವಾಸಿ ಪೈಝಲ್(24) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಈತ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಪೈಝಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here