ಪ್ರಾಣಿ ಪ್ರಪಂಚ-82

ಪೆಂಗ್ವಿನ್‌ (Aptenodytes forsteri)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಹೆಚ್ಚಾಗಿ ಇವುಗಳು ಶೀತಲ/ತಂಪು/ದೃವ ಪ್ರದೇಶಗಳಲ್ಲಿ ಜೀವಿಸುತ್ತದೆ. ವಿಶ್ವದ ಅತಿ ದೊಡ್ಡ ಎಂಪೆರರ್ ಪೆಂಗ್ವಿನ್‌ 3 ಅಡಿ 7 ಇಂಚು ಉದ್ದ ಹಾಗೂ 35ಕೆ.ಜಿ ತೂಕವಿದ್ದು, ವಿಶ್ವದ ಅತಿ ಚಿಕ್ಕ ಪೆಂಗ್ವಿನ್‌ ಆದ ಬ್ಲೂ ಪೆಂಗ್ವಿನ್/ಅಪ್ಸರೆ ಪೆಂಗ್ವಿನ್/‌ ಫೇರಿ ಪೆಂಗ್ವಿನ್‌ 16 ಇಂಚು ಉದ್ದ ಹಾಗೂ 1 ಕೆ.ಜಿ ತೂಕವಿದೆ.

ದೊಡ್ಡ ದೈತ್ಯ ಪೆಂಗ್ವಿನ್‌ ಶೀತಲ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದರೆ ಚಿಕ್ಕ ಪೆಂಗ್ವಿನ್‌ ಉಷ್ಣ/ಸಮಶೀತೋಷ್ಣ ವಲಯದಲ್ಲಿ ಕಾಣಬಹುದು. ಇವುಗಳು ಹಾರಲಾಗದ ವಿಶಿಷ್ಟ ಜಲಚರ ಪಕ್ಷಿಗಳು. ಕಪ್ಪು ಬಿಳಿ ಬಣ್ಣದ ದೇಹ ಹಾಗೂ ತೆವಳಲು ರೆಕ್ಕೆಗಳೂ ಇರುವುದು. ಪೆಂಗ್ವಿನ್‌ ಗಳು ಉಭಯವಾಸಿಗಳು. ಹೆಚ್ಚಿನ ಸಮಯ ನೆಲದ ಮೇಲೆ (ಭೂಮಿಯ ಮೇಲೆ) ಕಳೆಯುವುದು. ಆಹಾರ ವಿಹಾರಕ್ಕಾಗಿ ನೀರಿನಲ್ಲಿಳಿಯುವುದು.

ಉಭಯವಾಸಿ ಪೆಂಗ್ವಿನ್‌ ಗಳು ಮೀನು, ಸ್ಕ್ವಿಡ್‌ ಅಥವಾ ಕಟ್ಟಲ್‌ ಮೀನನ್ನು ತಿನ್ನುತ್ತದೆ. ನೀರಿನಲ್ಲಿ ಸರಾಗವಾಗಿ ಈಜಲು ಐಸ್/ಹಿಮ ಗಡ್ಡೆಗಳ/ನೀರಿನ ಮೇಲೆ ಬೋರಲಾಗಿ ಮಲಗಿ ತೆವಳು ರೆಕ್ಕೆಗಳಿಂದ ಮುಂದೆ ನುಸುಳುವುದು. ಜೋಡಿಹಕ್ಕಿಗಳಾಗಿಯೇ ಕಾಣಸಿಗುವುದು. ಗುಂಪುಗಳಲ್ಲಿ ಹಿಂಡುಗಳಲ್ಲಿ ಚಲಿಸುವುದು. ಒಂದು ಕಾಲಕ್ಕೆ 1 ಜೊತೆ ಮೊಟ್ಟೆಗಳನ್ನಿಡುವುದು (2ಮೊಟ್ಟೆ).

ಗಂಡು ಹೆಣ್ಣು ಜೋಡಿಯಾಗಿ, ಒಂದಾದ ನಂತರ ಒಂದು ಮೊಟ್ಟೆಗಳಿಗೆ ಕಾವು ಕೊಡುವುದು. ಒಂದು ಪೆಂಗ್ವಿನ್‌ ನೀರಿಗೆ ಆಹಾರಕ್ಕಾಗಿ ಹೋದರೆ ಇನ್ನೊಂದು ಮೊಟ್ಟೆಗೆ ಕಾವು ಕೊಡುತ್ತದೆ. ಹೀಗಾಗಿ ಮೊಟ್ಟೆಯೊಡೆದು ಮರಿಯಾಗಲು ಕೆಲವು ದಿನಗಳಿಂದ ಹಿಡಿದು ಹಲವು ವಾರಗಳು ಸಾಗಬಹುದು.

 

LEAVE A REPLY

Please enter your comment!
Please enter your name here