ಹಿಮಕರಡಿ (Ursus maritimus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಹಿಮಕರಡಿಯು ಆರ್ಟಿಕ್ ಸಾಗರ, ಆರ್ಟಿಕ್ ವೃತ್ತ ವಲಯ ಹಾಗೂ ಆರ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುವುದು.
ಹಿಮಕರಡಿಯು ಪ್ರಪಂಚದ ಅತಿ ದೊಡ್ಡ/ದೈತ್ಯ ಮಾಂಸಾಹಾರಿ ವನ್ಯಮೃಗವಾಗಿದ್ದು ಶೀತಲ, ಹಿಮಪ್ರದೇಶಕ್ಕೆ ಒಗ್ಗುವಂತ ದೇಹ ರಚನೆ ಹಾಗೂ ದಪ್ಪನೆಯ ತುಪ್ಪಟವನ್ನು ಹೊಂದಿದೆ. ಆಹಾರಕ್ಕಾಗಿ, ಹಿಮಗಡ್ಡೆಗಳ ಬಳಿ ಬೀಡುಬಿಡುವ ಸಮುದ್ರ ಸಿಂಹ ಅಥವಾ ಸೀಲ್ ಪ್ರಾಣಿಯನ್ನು ಅವಲಂಬಿಸಿರುತ್ತದೆ. ಹಿಮಕರಡಿಗಳು 25 ವರ್ಷಕ್ಕೂ ಹೆಚ್ಚು ಬಾಳಿ ಬದುಕುತ್ತದೆ.
ಗಂಡು ಹಿಮಕರಡಿ (ಬೋರ್) 350-680 ಕೆ.ಜಿ ತೂಕವಿರುತ್ತೆ ಹಾಗೂ ಹೆಣ್ಣು(ಸೌ) 175-340 ಕೆ.ಜಿ ತೂಕವಿರುತ್ತದೆ. ಭೂಮಿ ಮೇಲೆ ಹುಟ್ಟಿದರೂ ಜೀವನದ ಬಹುತೇಕ ಸಮಯವನ್ನು ಸಮುದ್ರ ನೀರಿನಲ್ಲಿ ಕಳೆಯುತ್ತದೆ.
ಮಾನವನ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಹಾಗೂ ಆರ್ಟಿಕ್ ಪ್ರದೇಶದಲ್ಲಿ ತೈಲ ಸೋರಿಕೆಯಿಂದ ಅನೇಕ ಜಲಜಂತು, ಜಲಚರ ಹಾಗೂ ಅದನ್ನವಲಂಬಿಸಿ ಬದುಕುವ ಹಿಮಕರಡಿಗಳು ಸತ್ತು ಅವಸಾನದ ಅಂಚಿನಡಿ ಸಾಗುತ್ತಿವೆ. ವೃದ್ಧ, ಗಾಯಗೊಂಡ ಹಿಮಕರಡಿಗಳು ಸೂಕ್ತ ಹಾದಿಯಿಲ್ಲದೆ, ಬೇಟೆಯಾಡಿ ಆಹಾರ ಸೇವಿಸಲಾಗದೆ, ಹಸಿವು, ರೋಗರುಜಿನಗಳಿಂದ ಸಾವನ್ನಪ್ಪುತ್ತಿವೆ.