ಮಂಗಳೂರು: ಉಡುಪಿಯ ನಿಟ್ಟೂರಿನಲ್ಲಿ ಹುಲಿಕುಣಿತದ ಪ್ರದರ್ಶನ ನೀಡುತ್ತಿದ್ದ ವೇಳೆ ಹುಲಿವೇಷಧಾರಿ ಆವೇಶಕ್ಕೊಳಗಾಗಿ ವೇದಿಕೆಯಲ್ಲಿ ಹಾಕಿದ್ದ ಮ್ಯಾಟನ್ನು ಬಾಯಿಯಿಂದ ಕಚ್ಚಿ ಹರಿದ ಘಟನೆ ನಡೆದಿದ್ದು ವೀಡಿಯೋ ವೈರಲ್ ಆಗಿದೆ.
ವೇದಿಕೆಯ ಮೇಲೆ ಹುಲಿವೇಷಧಾರಿಯ ಮೈಮೇಲೆ ಶಕ್ತಿಯೊಂದು ಅವಾಹನೆಗೊಂಡು ಮ್ಯಾಟನ್ನು ಬಾಯಿಯಿಂದ ಕಚ್ಚಿ ಹರಿದು ಹಾಕಲಾಗಿದೆ. ವೇಷಧಾರಿಯ ಮೈಮೇಲೆ ಶಕ್ತಿಯೊಂದು ಅವಾಹನೆಗೊಂಡದ್ದನ್ನು ಅರಿತ ಸಹವೇಷಧಾರಿಗಳು, ತಂಡದ ಇತರ ಸದಸ್ಯರು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ. ಹುಲಿವೇಷಧಾರಿಗಳಲ್ಲಿ ಅಗೋಚರ ಶಕ್ತಿಯೊಂದು ಅವಾಹನೆಗೊಂಡು ಆವೇಶಕ್ಕೊಳಗಾಗುವುದು ಸಾಮಾನ್ಯ ಎಂದು ಹೇಳಲಾದರೂ ಈ ಘಟನೆ ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಬ್ಯಾಂಡ್, ತಾಸೆಗಳ ಲಯಬದ್ದ ಬಡಿತ, ಜನರನ್ನು ಸೆಳೆಯುವ ಹುಲಿಕುಣಿತ, ಹುಲಿಕುಣಿತಕ್ಕೆ ಮರುಳಾದ ಜನ. ಆದರೆ ಆರಾಧನೆಯ ದೃಷ್ಟಿಯಿಂದ ಹರಕೆ ಕಟ್ಟಿಕೊಂಡು ಹುಲಿವೇಷ ಧರಿಸಿ ಪ್ರದರ್ಶನ ನೀಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ದುರ್ಗೆಯ ವಾಹನವಾಗಿರುವ ಹುಲಿಯ ವೇಷಧರಿಸುವ ಮೊದಲು ಸಾಂಪ್ರದಾಯಿಕ ಆರಾಧನಾ ಕ್ರಮಗಳೊಂದಿಗೆ ವೃತಾಚರಣೆಯನ್ನು ಮಾಡಬೇಕಾಗಿರುವುದರಿಂದ ಹುಲಿ ವೇಷಧಾರಿಗಳು ಕುಣಿಯುತ್ತಿದ್ದಂತೆಯೇ ಅಗೋಚರ ಶಕ್ತಿಯ ಪ್ರಭಾವದಿಂದ ಆವೇಶಕ್ಕೊಳಗಾಗುತ್ತಾರೆ. ಇಂತಹದೇ ಘಟನೆ ಇಲ್ಲಿ ನಡೆದಿದೆ ಎನ್ನುವುದು ಬಲ್ಲವರ ಮಾತು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ ಕೃಪೆ: ಕೋಸ್ಟಲ್ ಕಿಂಗ್