ತ್ರಿಪುರ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ

ಮಂಗಳೂರು(ಅಗರ್ತಲ): ತ್ರಿಪುರಾದ ಧನ್ಪುರ್‌ ಮತ್ತು ಬೋಕ್ಸಾ ನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಬೋಕ್ಸಾ ನಗರದಲ್ಲಿ ಬಿಜೆಪಿಯ ತಫಜ್ಜಲ್‌ ಹುಸೈನ್‌ ಸಿಪಿಐಎಂ ನ‌ ಮಿಝಾನ್‌ ಹುಸೈನ್ ಅವರನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಧನಪುರದಲ್ಲಿ ಬಿಜೆಪಿಯ ಬಿಂದು ದೇಬನಾಥ್‌ ಸಿಪಿಐಎಂ ನ ಕೌಶಿಕ್‌ ಚಂದಾ ವಿರುದ್ದ 18,871 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಉತ್ತರಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕೇರಳದ ಪುತ್ತುಪಲ್ಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಉತ್ತರಾಖಂಡದ ಭಾಗೇಶ್ವರ ಕ್ಷೇತ್ರದಲ್ಲಿ ಮತ್ತು ಬಂಗಾಳದ ಧುಪ್ಗುರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಜಾರ್ಖಂಡ್‌ ನ ದುಮ್ರಿ ಕ್ಷೇತ್ರದಲ್ಲಿ ಜೆಎಂಎಂ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here