ಉಪ ಚುನಾವಣೆ: ಬಾಗೇಶ್ವರದಲ್ಲಿ ಬಿಜೆಪಿ-ಧುಪ್ಗುರಿಯಲ್ಲಿ ಟಿಎಂಸಿ ಗೆ ಗೆಲುವು

ಮಂಗಳೂರು: ಹಾಲಿ ಬಿಜೆಪಿ ಶಾಸಕರ ನಿಧನದಿಂದ ತೆರವಾಗಿದ್ದ ಉತ್ತರಾಖಂಡದ ಬಾಗೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಸೆ.5ರಂದು ಉಪಚುನಾವಣೆ ನಡೆದಿತ್ತು. ಸೆ.8ರಂದು ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲವು ಸಾಧಿಸಿದೆ. ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಯಾಗಿ ಪಾರ್ವತಿ ದಾಸ್ ಬಾಗೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆ ಆಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸಂತ್ ಕುಮಾರ್ ಸ್ಪರ್ಧಿಸಿದ್ದರೆ, ಹಿಂದೆ 2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ರೈತ ಭಗವತಿ ಪ್ರಸಾದ್ ತ್ರಿಕೋಟಿ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿತ್ತು. ಸದ್ಯ ಬಿಜೆಪಿ ಹಿಡಿತದಲ್ಲಿರುವ ಬಾಗೇಶ್ವರ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಹರಸಾಹಸ ಪಟ್ಟಿತ್ತು, ಆದರೆ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಗಿದೆ. ಇನ್ನು ಉತ್ತರಾಖಂಡದಲ್ಲಿ ಇದುವರೆಗೆ ಒಟ್ಟು 14 ವಿಧಾನಸಭಾ ಉಪಚುನಾವಣೆಗಳು ನಡೆದಿದ್ದು, ಈ ಪೈಕಿ ಆಡಳಿತಾರೂಢ ಬಿಜೆಪಿ 13 ಬಾರಿ ಗೆಲುವು ಸಾಧಿಸಿತ್ತು. ಬಾಗೇಶ್ವರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಚಂದನ್ ರಾಮದಾಸ್ ಏಪ್ರಿಲ್ 23 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಅಂದಿನಿಂದ ಬಾಗೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಾನ ತೆರವುಗೊಂಡಿತ್ತು. ಇದೀಗ ಅವರ ಪತ್ನಿಯೇ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಧುಪ್ಗುರಿ ಅಸೆಂಬ್ಲಿ ಸ್ಥಾನವನ್ನು ಬಿಜೆಪಿಯಿಂದ ವಶಪಡಿಸಿಕೊಂಡಿದೆ. ಟಿಎಂಸಿ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ 4,500 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನೊಂದು ಕಡೆ ಈ ವರ್ಷದ ಆರಂಭದಲ್ಲಿ ಬಂಗಾಳದ ಹಾಲಿ ಬಿಜೆಪಿ ಶಾಸಕ ಬಿಶು ಪದಾ ರೇ ಅವರ ನಿಧನದ ನಂತರ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. “ಧುಪ್ಗುರಿ (ಉಪಚುನಾವಣೆ) ಫಲಿತಾಂಶವು ಬಂಗಾಳದ ಜನರು ಮಮತಾ ಬ್ಯಾನರ್ಜಿ ಅವರೊಂದಿಗೆ ಇದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಟಿಎಂಸಿ ವಕ್ತಾರ ರಿಜು ದತ್ತಾ ಪಿಟಿಐಗೆ ತಿಳಿಸಿದರು. ಎಸ್ ಸಿ-ಮೀಸಲಾತಿ ಕ್ಷೇತ್ರವಾಗಿರುವ ಧುಪ್ಗುರಿ ಸುಮಾರು 50 ಪ್ರತಿಶತ ರಾಜ್ಬನ್ಷಿ ಹಾಗೂ 15 ಪ್ರತಿಶತ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿದೆ. ರಾಜಬನ್ಶಿ ಮತಗಳನ್ನು ಸೆಳೆಯಲು ಎಲ್ಲಾ ಪ್ರಮುಖ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

 

 

LEAVE A REPLY

Please enter your comment!
Please enter your name here