ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ

ಮಂಗಳೂರು(ಕಾಸರಗೋಡು): ಕುಂಬಳೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಬಣೂರು ಮತ್ತು ಪಚ್ಚಂಬಳ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದೆ.

ಕುಬಣೂರಿನಲ್ಲಿ ಮೂರು ಅಂಗಡಿಗಳ ಶಟರ್ ಮುರಿದು 11 ಸಾವಿರ ರೂ. ನಗದು ಹಾಗೂ ಸಿಗರೇಟ್ ಗಳನ್ನು ಕಳವು ಮಾಡಲಾಗಿದೆ. ಎರಡು ಜನರಲ್ ಸ್ಟೋರ್ ಮತ್ತು ಒಂದು ಅಂಗಡಿಯಿಂದ ಕಳವು ಮಾಡಲಾಗಿದೆ. ಪಚ್ಚಂಬಳದಲ್ಲಿ ಎರಡು ಅಂಗಡಿಗಳಲ್ಲಿ ಕಳವು ಮಾಡಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here