ಅಭ್ಯರ್ಥಿಗೆ ಲಂಚ ಪ್ರಕರಣ – ಕೋರ್ಟ್ ಗೆ ಹಾಜರಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಗೆ ಗಡುವು

ಮಂಗಳೂರು(ಕಾಸರಗೋಡು): ಅಭ್ಯರ್ಥಿಯಿಂದ ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಸೆ. 21ರಂದು ನೇರವಾಗಿ ಕೋರ್ಟ್’ಗೆ ಹಾಜರಾಗುವಂತೆ ಕಾಸರಗೋಡು ಜಿಲ್ಲಾ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.

ನೋಟಿಸ್ ನೀಡಿದ್ದರೂ ಇದುವರೆಗೆ ಅಭ್ಯರ್ಥಿಗಳು ಹಾಜರಾಗಿಲ್ಲ ಎಂದು ಸ್ಪಷ್ಟಪಡಿಸಿರು ಕಾಸರಗೋಡು ನ್ಯಾಯಾಲಯ ಹಾಜರಾಗುವಂತೆ ಆದೇಶ ನೀಡಿದೆ. ಮೇ 20ರಂದು ಸೆ. 5ರಂದು ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಯಾರೂ ಹಾಜರಾಗದ ಹಿನ್ನೆಲೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿರುವ ಕೋರ್ಟ್‌ ಈ ಆದೇಶ ನೀಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಬಿ, ಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂಪಡೆಯುವಂತೆ ಬೆದರಿಸಿದ್ದು ಬಳಿಕ ಹಣ ಹಾಗೂ ಮೊಬೈಲ್ ನೀಡಿರುವುದು ಬೆಳಕಿಗೆ ಬಂದಿತ್ತು. ನ್ಯಾಯಾಲಯದ ಆದೇಶದಂತೆ ಪೊಲೀಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದು, ಪ್ರಕರಣದಲ್ಲಿ ಯುವ ಮೋರ್ಚಾ ರಾಜ್ಯ ಮಾಜಿ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿಜೆಪಿ ಮುಖಂಡರಾದ ಕೆ. ಬಾಲಕೃಷ್ಣ ಶೆಟ್ಟಿ, ಮಣಿಕಂಠ ರೈ, ಲೋಕೇಶ್ ನೋಂಡ ಮೊದಲಾದವರು ಆರೋಪಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here