ಮಂಗಳೂರು(ಲಿಸ್ಬನ್): ಪೋರ್ಚುಗಲ್‌ನ ಸಾವೋ ಲೊರೆನ್ಸಕೊ ಡೆ ಬೈರೊ ಎಂಬ ಪುಟ್ಟ ನಗರದ ರಸ್ತೆಯಲ್ಲಿ ರೆಡ್ ವೈನ್ ಪ್ರವಾಹದಂತೆ ಹರಿದಿದ್ದು ವೀಡಿಯೋ ವೈರಲ್ ಆಗಿದೆ.
ಲಕ್ಷಾಂತರ ಲೀಟರ್ ವೈನ್ ಕಡಿದಾದ ಗುಡ್ಡದಿಂದ ಕೆಳಗೆ ನಗರದ ರಸ್ತೆಗಳಿಗೆ ಹರಿದು ಬರುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಮೂಕವಿಸ್ಮಿತರಾದರು. ಪಟ್ಟಣದ ಡಿಸ್ಟಿಲ್ಲರಿಯಲ್ಲಿ 20 ಲಕ್ಷ ಲೀಟರಿಗೂ ಅಧಿಕ ಕೆಂಪು ವೈನ್ ಹೊಂದಿದ್ದ ಬ್ಯಾರೆಲ್‌ಗಳಿದ್ದ ಟ್ಯಾಂಕೊಂದು ಅಚಾನಕ್ಕಾಗಿ ಸ್ಫೋಟಗೊಂಡ ಪರಿಣಾಮ ಕೆಂಪು ವೈನ್ ರಸ್ತೆ ತುಂಬೆಲ್ಲಾ ಹರಿದಿದೆ. ಡಿಸ್ಟಿಲ್ಲರಿ ಪಕ್ಕದ ಮನೆಯೊಂದರ ತಳ ಅಂತಸ್ತಿನಲ್ಲಿ ವೈನ್ ನ ಕೃತಕ ನೆರೆ ಸೃಷ್ಟಿಯಾಗಿತ್ತು.
ಪಟ್ಟಣದ ಪಕ್ಕದ ಸೆರ್ಟಿಮಾ ನದಿಗೆ ಈ ವೈನ್ ಸೇರುವ ಮುನ್ನ ಎಚ್ಚೆತ್ತುಕೊಂಡ ಅಗ್ನಿಶಾಮಕ ದಳ, ಈ ವೈನ್ ಹತ್ತಿರದ ಗದ್ದೆಯೊಂದಕ್ಕೆ ಹರಿಯುವಂತೆ ಮಾಡಿದೆ. ಈ ಘಟನೆಗೆ ಕಾರಣವಾದ ಲೆವಿರಾ ಡಿಸ್ಟಿಲ್ಲರಿ ನಗರವಾಸಿಗಳಿಂದ ಕ್ಷಮೆಕೋರಿದೆಯಲ್ಲದೆ ಪಟ್ಟಣದ ರಸ್ತೆ ತುಂಬಾ ಹರಿದ ವೈನ್ ಅನ್ನು ಡ್ರೆಡ್ಜ್ ಮಾಡಿ ತೆರವುಗೊಳಿಸುವುದಾಗಿ ಹೇಳಿದೆಯಲ್ಲದೇ ದುರಸ್ತಿ ಕೆಲಸಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಭರಿಸುವುದಾಗಿಯೂ ಹೇಳಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
The citizens of Levira, Portugal were in for a shock when 2.2 million liters of red wine came roaring down their streets on Sunday. The liquid originated from the Levira Distillery, also located in the Anadia region, where it had been resting in wine tanks awaiting bottling. pic.twitter.com/lTUNUOPh9B
— Boyz Bot (@Boyzbot1) September 12, 2023