ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಪುತ್ರ – ಪುತ್ರನ‌ ಹೆಸರಿನಲ್ಲೇ ದೇವಸ್ಥಾನ ಕಟ್ಟಿದ ಹೆತ್ತವರು

ಆತ ಆ ಹೆತ್ತವರ ಮುದ್ದಿನ‌ ಮಗನಾಗಿದ್ದ. ಆದರೆ ವಿಧಿಯಾಟ ಬಲ್ಲವರು ಯಾರು..? ಆ ಮುದ್ದಿನ ಮಗ ಅವರೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ. ಮಗ ಬಾಹ್ಯವಾಗಿ ಇಲ್ಲದಿದ್ದರೇನಂತೆ, ಆತನ ನೆನಪು ಇಹಲೋಕದಲ್ಲಿ ಸದಾ ಇರಬೇಕೆಂದು ನಿರ್ಧಾರ ಮಾಡಿದ ಆ ಹೆತ್ತವರು ಮಾಡಿದ್ದೇನು ಗೊತ್ತಾ..?

ಅನಾರೋಗ್ಯದಿಂದ ಮೃತಪಟ್ಟಿದ್ದ ಮಗನಿಗಾಗಿ ತಂದೆ ತಾಯಿ ದೇವಸ್ಥಾನವನ್ನೇ ಕಟ್ಟಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಅನಂತಪುರದ ಪಾಮಿಡಿ ಪಟ್ಟಣದ ನಿವಾಸಿ ಆದಿನಾರಾಯಣ ಮತ್ತು ನಾಗಲಕ್ಷ್ಮಿ ದಂಪತಿಗಳಿಗೆ ಗಂಗಾಧರ್‌ ಏಕಮಾತ್ರ ಪುತ್ರ. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಮಗನ ಸಾವನ್ನು ಅರಗಿಸಿಕೊಳ್ಳಲಾಗದ ಆದಿನಾರಾಯಣ ಮತ್ತು ನಾಗಲಕ್ಷ್ಮಿ ತಮ್ಮ ಮಗನಿಗಾಗಿ ಮನೆಯಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಿದ್ದಾರೆ. ತೆನಾಲಿಯಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಮಗನ ವಿಗ್ರಹವನ್ನು ತಯಾರಿಸಿ ಮನೆಯಲ್ಲಿ ಪ್ರತಿಷ್ಟಾಪಿಸಿದ್ದಾರೆ. ಮಗ ತಮ್ಮೊಂದಿಗೆ ಇದ್ದಾನೆ ಎನ್ನುವ ದಂಪತಿಗಳು ಪ್ರತಿ ದಿನ ವಿಗ್ರಹದ ಬಟ್ಟೆಗಳನ್ನು ಬದಲಾಯಿಸುತ್ತಾರೆ. ಪುತ್ರನ ಹೆಸರಲ್ಲಿ  ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದಂಪತಿಗಳು ಮಗನ ಸಾವಿನ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಪುತ್ರಶೋಕಂ ನಿರಂತರಂ ಅಲ್ಲವೇ ?

LEAVE A REPLY

Please enter your comment!
Please enter your name here