ಮಂಗಳೂರು(ಕುಂದಾಪುರ): ಉದ್ಯಮಿಯೊಬ್ಬರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೇಟ್ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದೂ ಪರಚಿಂತಕಿ 7 ಕೋಟಿ ರೂಪಾಯಿ ವಂಚಕಿ ಚೈತ್ರಾ ಕುಂದಾಪುರ ತಾಯಿ ರೋಹಿಣಿ ಮಗಳ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ದೊಡ್ಡ ಮಗಳು, ಚೈತ್ರಾ ಬಂಧನದ ಬಗ್ಗೆ ಮಾಹಿತಿ ನೀಡಿದ್ದಳು. ಮನೆಯಲ್ಲಿ ಚೈತ್ರಾ ನಮಗೆ ಯಾವುದೇ ರೀತಿಯ ಟೆನ್ಶನ್ ನೀಡುತ್ತಿರಲಿಲ್ಲ. ಮನೆಯಲ್ಲಿ ನಾರ್ಮಲ್ ಆಗಿಯೇ ಇರುತ್ತಿದ್ದಳು. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದ ವ್ಯಕ್ತಿತ್ವ ಅವಳದ್ದು ಎಂದು ಹೇಳಿದ್ದಾರೆ. ಅರೆಸ್ಟ್ ಆದ ಬಳಿಕ ನಿನ್ನೆ ಎರಡು ಗಂಟೆಯ ಹೊತ್ತಿಗೆ ನನಗೆ ಪೊಲೀಸ್ ಮೂಲಕ ಕರೆ ಮಾಡಿದ್ದಳು. ಏನಾಗುವುದಿಲ್ಲ, ನೀನು ಆರಾಮವಾಗಿರು, ಔಷಧಿಗಳನ್ನು ತೆಗೆದುಕೊಳ್ಳಿ ಎಂದಿದ್ದಳು. ಅವಳ ಬಗ್ಗೆ ನನಗೆ ನಂಬಿಕೆ ಇದೆ. ಇನ್ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕಾರ್ಯ ನಡೆಸಿದ್ದಾರೆ. ನೇರ ಮಾತನಾಡುವ ಪ್ರವೃತ್ತಿ ಅವಳದ್ದು, ತಪ್ಪು ಮಾಡುವ ಪ್ರವೃತ್ತಿ ಅವಳದ್ದಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗುವ ಕುಟುಂಬ ನಮ್ಮದಲ್ಲ ಎಂದು ತಾಯಿ ರೋಹಿಣಿ ಹೇಳಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ