ಮಂಗಳೂರು (ಬೆಂಗಳೂರು): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ.ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ, ಚೈತ್ರಾ ಕುಂದಾಪುರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ವಿಚಾರಣೆಗಾಗಿ ಚೈತ್ರಾರನ್ನು ನಗರದ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಪೊಲೀಸರು ಕರೆತಂದಿದ್ದರು. ಈ ವೇಳೆ ಅಸ್ವಸ್ಥಗೊಂಡ ಚೈತ್ರಾ ಕುಸಿದುಬಿದ್ದರೆನ್ನಲಾಗಿದೆ. ಅವರನ್ನು ತಕ್ಷಣ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾರಿಗೆ ಮೂರ್ಛೆ ರೋಗವಿತ್ತೆನ್ನಲಾಗಿದ್ದು, ಇದೇ ಕಾರಣದಿಂದ ಅವರು ಕುಸಿದಬಿದ್ದಿದ್ದಾರೆ.